

ಡೈಲಿ ವಾರ್ತೆ: ಫೆ./16/2026
ಕಾರ್ಮಿಕರ ಹಕ್ಕುಗಳನ್ನು ಕಡಿತಗೊಳಿಸಿ ಕಂಪೆನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ಸರ್ಕಾರದ ಕ್ರಮ ಅಸಂವಿಧಾನಿಕ-ಎಸ್ಡಿಟಿಯು

ಬೆಂಗಳೂರು : ಪೆ16 : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ( ಎಸ್.ಡಿ.ಟಿ.ಯು ) ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ರಾಜ್ಯ ಸಂಚಾಲಕ ಅಥಾವುಲ್ಲಾ ಜೋಕಟ್ಟೆ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ರವಿವಾರ ನಡೆಯಿತು
SDTU ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕು ತಮಿಳ್ ನಾಡು, ರಾಜ್ಯ ಉಸ್ತುವಾರಿ ರಹೀಮ್ ಪಟೇಲ್, ಸಹ ಸಂಚಾಲಕ ಖಾದರ್ ಫರಂಗಿಪೇಟೆ, ಶಫಿ ರಾಯಚೂರು, ಸದಸ್ಯರಾದ ಅಬೂಬಕ್ಕರ್ ಮದ್ದ, ಇಮ್ರಾನ್ ಬೆಳಗಾವಿ,ಅಲ್ತಾಫ್ ಮೈಸೂರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
👉ಭಾರತದಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ಹಲವು ಕೇಂದ್ರ ಕಾರ್ಮಿಕ ಕಾಯ್ದೆಗಳು (Central Labour Laws) ಜಾರಿಯಲ್ಲಿದ್ದವು. ಅವುಗಳನ್ನು ಕೇಂದ್ರ ಸರಕಾರ ನಾಲ್ಕು ಕಾಯ್ದೆಗಳಾಗಿ ಮಾರ್ಪಡುಗೊಳಿಸಿದೆ ಈ ಕಾನೂನುಗಳು ಕಾರ್ಮಿಕರ ಹಕ್ಕುಗಳಲ್ಲಿ ಕಡಿತಗೊಳ್ಳುವ ಸಾಧ್ಯತೆಗಳಿವೆ, ಕಂಪನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ ಅನುಷ್ಠಾನದಲ್ಲಿಯೂ ಅಸ್ಪಷ್ಟತೆ ಕಂಡು ಬರುತ್ತಿದೆ ಇದನ್ನು ರದ್ದುಗೊಳಿಸಿ ಹಿಂದಿನ ಕಾನೂನುಗಳನ್ನೇ ಸಮರ್ಪಕವಾಗಿ ಜಾರಿಗೊಳಿಸಬೇಕು
👉 ಕರ್ನಾಟಕ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಪದವೀಧರರು ಉತ್ತಮ ಶಿಕ್ಷಣ ಪಡೆದಿದ್ದರೂ, ತಮ್ಮ ಅರ್ಹತೆಗೆ ತಕ್ಕ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಇದ್ದರೂ, ಗ್ರಾಮಾಂತರ ಯುವಕರಿಗೆ ಮಾಹಿತಿ ಕೊರತೆ, ಮಾರ್ಗದರ್ಶನದ ಅಭಾವ ಹಾಗೂ ಆರ್ಥಿಕ ಅಡಚಣೆಗಳಿಂದ ಅವಕಾಶಗಳು ಸಿಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಗ್ರಾಮಾಂತರ ಪ್ರದೇಶಗಳಲ್ಲೇ ವಿಶೇಷ ಉದ್ಯೋಗ ಕ್ಯಾಂಪ್ಗಳನ್ನು ಆಯೋಜಿಸುವುದು ಅತ್ಯಾವಶ್ಯಕವಾಗಿದೆ.
👉 ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳಿಗೆ ಪದವಿಯವರೆಗೆ ಸರಕಾರ ಉಚಿತ ಶಿಕ್ಷಣ ನೀಡಬೇಕು ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.