ಡೈಲಿ ವಾರ್ತೆ:24/DEC/2024
ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ
ಕುಂದಾಪುರ: ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿಯಲ್ಲಿ ಡಿ. 24 ರಂದು ಮಂಗಳವಾರ ಶಾಲಾ ವಾರ್ಷಿಕೋತ್ಸವನ್ನು ತೌಹೀದ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಡಾ. ಐಷಾ ರಾಯಿಹ, ಡಾ. ಸಹನಾ ಶೇಖ್, ತೌಹೀದ್ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ಚೌಗುಲೆ, ಸದಸ್ಯರಾದ ಜನಾಬ್ ಫಜಲು ರೆಹಮಾನ್, ವ್ಯವಸ್ಥಾಪಕರಾದ ತಾಹಿರ್ ಹಸನ್, ತೌಹೀದ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸಮೀನ ಬುಖಾರಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಭಾ ಬಾನು ಉಪಸ್ಥಿತರಿದ್ದರು.
“ಶಿಕ್ಷಣವೆಂಬುದು ಕೇವಲ ಅಂಕಗಳಿಸುವುದು ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ” ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಐಷಾ ರಾಯಿಹಾರವರು ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಡಾ.ಸಹನಾ ಶೇಖ್ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ತಿಳಿಸಿದರು.
ಮುಖ್ಯ ಶಿಕ್ಷಕಿ ಸಭಾ ಬಾನು ಅವರು 2024-25 ನೇ ಸಾಲಿನ ಶೈಕ್ಷಣಿಕ ವಾರ್ಷಿಕ ವರದಿಯನ್ನು ಮಂಡಿಸಿದರು. 2023- 24 ಸಾಲಿನ 10 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಐಷಾ ರೂಹಾಳನ್ನು ಮತ್ತು ಅತ್ಯುತ್ತಮ ಶ್ರೇಣಿ ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಅನಾವರಣಗೊಂಡವು.
ವಿದ್ಯಾರ್ಥಿನಿ ಐದಾ ನುಮಾ ಸ್ವಾಗತಿಸಿ, ರಿಂಷ ಅತಿಥಿಗಳನ್ನು ಪರಿಚಯಿಸಿದರು,ಸಾನಿಯಾ ಮಾಲಿ ಮತ್ತು ಐರಾ ನಿರೂಪಿಸಿದರು,ಝೈನಾಬ್ ನಾಕುದ ವಂದಿಸಿದರು.