ಡೈಲಿ ವಾರ್ತೆ:29/DEC/2024

ಬಿದ್ಕಲ್ ಕಟ್ಟೆ : ಮೊಬೈಲ್ ವ್ಯಸನ ವಿರೋಧಿ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮ ಅನಾವರಣ: ಮೊಬೈಲ್ ವಿಪರೀತ ಬಳಕೆ ವಿದ್ಯಾರ್ಥಿಗಳ ಜೀವನ ಕೌಶಲ್ಯಕ್ಕೆ ಧಕ್ಕೆ – ಡಾ.ಜಿ. ಹೆಚ್. ಪ್ರಭಾಕರ ಶೆಟ್ಟಿ ಸಲಹೆ

  • ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ,
    ಪತ್ರಕರ್ತರು.

ಕುಂದಾಪುರ: ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ( ರಿ.,) ಇವರ ಆಶ್ರಯದಲ್ಲಿ ಮೊಬೈಲ್ ವ್ಯಸನ ವಿರೋಧಿ ಅಭಿಯಾನ 2024 ಇದರ ಉದ್ಘಾಟನಾ ಹಾಗೂ ಜಾಗೃತಿ ಕಾರ್ಯಕ್ರಮ ಕೆ.ಪಿ.ಎಸ್‌ (ಪ್ರೌಢಶಾಲಾ ವಿಭಾಗ)ಬಿದ್ಕಲ್ ಕಟ್ಟೆ ಇಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಿ. ಹೆಚ್. ಪ್ರಭಾಕರ ಶೆಟ್ಟಿ ಮೊಬೈಲ್ ನ ವಿಪರೀತ ಬಳಕೆಯಿಂದಾಗಿ ವಿದ್ಯಾರ್ಥಿಗಳು ಸಾಮಾಜಿಕ ಹಾಗೂ ಶೈಕ್ಷಣಿಕ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ವ್ಯಸನದಿಂದ ಮಕ್ಕಳು ದೂರ ಉಳಿಯಲು ವೈಜ್ಞಾನಿಕ ತಿಳುವಳಿಕೆ ಮುಖ್ಯ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನೋವೈದ್ಯ ಡಾ. ಪಿ. ವಿ. ಭಂಡಾರಿಯವರು ನಿಯಂತ್ರಣ ಮೀರುವುದು , ಅತಿಯಾದ ಸಿಟ್ಟು, ತಪ್ಪಿತಸ್ಥ ಭಾವನೆ ಹಾಗೂ ನಿದ್ರೆಯಿಂದ ಏಳುತ್ತಲೇ ಮೊಬೈಲನ್ನು ಬಯಸುವುದು ವ್ಯಸನವನ್ನು ಸ್ವಯಂ ಗ್ರಹಿಸಲು ಇರುವ ನಾಲ್ಕು ಅಂಶಗಳಾಗಿವೆ ಎಂದರು.

ಹದಿಹರಿಯದವರಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮೊಬೈಲ್ ಫೋನ್ ವ್ಯಸನ ಹಾಗೂ ಮೆದುಳಿನಲ್ಲಿ ಹೆಚ್ಚು ಸ್ರವಿಕೆಯಾಗುವ ಡೋಪಮಿನ್ ನ ದುಷ್ಪರಿಣಾಮದ ಕುರಿತು ವಿವರಿಸಿ, ಹದಿಹರಿಯದವರಲ್ಲಿ ಮೆದುಳು ಒತ್ತಡವನ್ನು ನಿರ್ವಹಿಸಲು ಕನಿಷ್ಠ 8 ಗಂಟೆ ನಿದ್ರಿಸಬೇಕು. ಒಬ್ಬ ವಿದ್ಯಾರ್ಥಿ ಒಂದು ದಿನಕ್ಕೆ ಮೂರು ತಾಸಿಗಿಂತ ಹೆಚ್ಚು ಮೊಬೈಲ್ ನೋಡಬಾರದು, ಆ ಮೂರು ತಾಸನ್ನು 20 ನಿಮಿಷದ ನಿಯಮದಂತೆ ಶೈಕ್ಷಣಿಕ ಹಾಗೂ ಆರೋಗ್ಯಕರ ಮನೋರಂಜನ ವೀಕ್ಷಣೆಗೆ ಉಪಯೋಗಿಸಿಕೊಂಡರೆ ಅದರಿಂದ ಋಣಾತ್ಮಕ ತೊಂದರೆಯಾಗದು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿಯವರು ಆನ್ಲೈನ್ ಗೇಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿರುವುದರಿಂದ ಮಕ್ಕಳಲ್ಲಿ ಆತಂಕಕಾರಿ ವರ್ತನಾ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ, ಈ ಕುರಿತು ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯ ಎಂದರು.

ಉಪ ಪ್ರಾಂಶುಪಾಲರಾದ ಕರುಣಾಕರ ಶೆಟ್ಟಿಯವರು ಕೋವಿಡ್ ಸಾಂಕ್ರಮಿಕ ನಂತರ ಮಕ್ಕಳಲ್ಲಿಟ್ರಸ್ಟಿಗಳಾದ ಸಂತೋಷ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು ಮೊಬೈಲ್ ಬಳಕೆ ಹೆಚ್ಚಾಗಿದ್ದು ಮನೋರಂಜನಿಗೆ ಪರ್ಯಾಯ ಕಂಡುಕೊಳ್ಳುವ ಅನಿವಾರ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಟ್ರಸ್ಟ್ ನ ಪ್ರವರ್ತಕರು ಮೊಳಹಳ್ಳಿ ದಿನೇಶ್ ಹೆಗ್ಡೆ
ಹದಿಹರೆಯದವರನ್ನು ವ್ಯಾಪಾಕವಾಗಿ ಬಾಧಿಸುತ್ತಿರುವ ಮೊಬೈಲ್ ಫೋನ್ ವ್ಯಸನದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ಸಂಸ್ಥೆಯು ಈ ಕುರಿತಾಗಿ ಕುಂದಾಪುರ ಕ್ಷೇತ್ರದಲ್ಲಿ ಬರುವ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳಲ್ಲಿ ಉಚಿತ ಕಾರ್ಯಗಾರ ಹಾಗೂ ಆಪ್ತಸಮಾಲೋಚನೆಯನ್ನು ಒದಗಿಸುವ ಮೂಲಕ ಈ ತೊಂದರೆಯನ್ನು ತಡೆಹಿಡಿಯಲು
ಒಂದು ಹೆಜ್ಜೆ ಮುಂದಿಟ್ಟಿದೆ. ಸಮುದಾಯದ ಬೆಂಬಲವಿದ್ದರೆ ಮಾತ್ರ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮದ. ಮೂಲೆ ಮೂಲೆಗಳನ್ನು ತಲುಪಿ ಈ ವ್ಯಸನದ ವಿರುದ್ಧ ಹೋರಾಡಲ್ಲಿಕ್ಕಿದ್ದೇವೆ ಎಂಬ ವಿಶ್ವಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕಾಲೇಜ್ ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ ಹೆಗ್ಡೆ, ಎಸ್.ಡಿ. ಎಮ್.ಸಿ ಉಪಾಧ್ಯಕ್ಷ ರಾಘವೇಂದ್ರ ಅಡಿಗ ಉಪಸ್ಥಿತರಿದ್ದರು
ಮನಶಾಸ್ತ್ರಜ್ಞರಾದ ಗಿರೀಶ್ ಎಂ.ಎನ್ ಪ್ರಾಸ್ತಾವಿಕ ಮಾತನ್ನಾಡಿ, ಪದವಿಧರ ಶಿಕ್ಷಕರಾದ ಆದರ್ಶ ನೆರೆದ ಗಣ್ಯರನ್ನು ಸ್ವಾಗತಿಸಿ,
ಟ್ರಸ್ಟಿಗಳಾದ ಸಂತೋಷ ಕಾಂಚನ್ ಕಾರ್ಯಕ್ರಮ ನಿರೂಪಿಸಿ,
ಟ್ರಸ್ಟಿಗಳಾದ ಗಣೇಶ್ ಎನ್. ವಂದಿಸಿದರು.