ಡೈಲಿ ವಾರ್ತೆ:31/DEC/2024
ಕೋಡಿ| ಆಧುನಿಕತೆಯ ಜೀವನಶೈಲಿಯಿಂದ ಹೊರಬನ್ನಿ-ಡಾ.ಮಾಧವ ಪೈ
ಕೋಟ: ಇಂದಿನ ಜೀವನ ಪದ್ಧತಿ ಆಧುನಿಕತೆಗೆ ಒಗ್ಗಿಕೊಂಡಿದೆ ಇದರ ದುಷ್ಪರಿಣಾಮದಿಂದ ಸಮಾಜದಲ್ಲಿ ಒಂದಿಷ್ಟು ಬದಲಾವಣೆಗೊಂಡು ಜೀವನ ಶೈಲಿ ಅದಪತನದತ್ತ ಸಾಗುತ್ತಿದೆ ಇದು ದುರದೃಷ್ಟಕರ ಈ ಬಗ್ಗೆ ಪೋಷಕರೇ ಜಾಗೃತರಾಗಬೇಕಾದ ಸಮಯಗಳು ಎದುರಾಗಿದೆ ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ನುಡಿದರು.
ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣ ಪಾಲ ಇವರ ಆಯೋಜನೆಯಲ್ಲಿ ಕೋಡಿ ಹೊಸಬೇಂಗ್ರೆ ಅಂಗನವಾಡಿಯಲ್ಲಿ ಗ್ರಾಮ ಪಂಚಾಯತ್ ಕೋಡಿ, ಶಿಶುಅಭಿವೃದ್ಧಿ ಯೋಜನೆ ಬ್ರಹ್ಮವಾರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಸಹಭಾಗಿತ್ವದಡಿ ಸ್ವಚ್ಛ ಹಾಗೂ,ಆರೋಗ್ಯವಂತ ಸಮಾಜದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ವ್ಯಾಮೂಹ, ದಿನಚರಿಯ ಆಹಾರ ಪದ್ಧತಿಗಳು ಬದಲಾಗಿವೆ ಇದರಿಂದ ದೇಹದ ಆರೋಗ್ಯ ಮತ್ತು ಮನಸ್ಸಿನ ಮೇಲೆ ವ್ಯತಿರಿಕ್ತ ದುಷ್ಪರಿಣಾಮ ಎದುರಿಸುವಂತ್ತಾಗಿದೆ ಈ ದಿಸೆಯಲ್ಲಿ ನಮ್ಮ ಆಹಾರ ಕ್ರಮ ದೇಶಿಯ ಪದ್ಧತಿ,ಯೋಗ ಆಧ್ಯಾತ್ಮಗಳ ಮೊರೆಹೋಗುವ ಅವಶ್ಯಕತೆಯನ್ನು ಮನದಟ್ಟು ಮಾಡಿದರು.
ಕಾರ್ಯಕ್ರಮವನ್ನು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಭಾರತೀಯ ವಿಕಾಸ ಟ್ರಸ್ಟ್ ಮಣ ಪಾಲ ಇದರ ಸಂಯೋಜಕ ರಾಘವೇಂದ್ರ ಆಚಾರ್ ,ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಲಕ್ಷಿö್ಮÃ,ಕೋಡಿ ಗ್ರಾಮಪಂಚಾಯತ್ ಸದಸ್ಯರಾದ ಪ್ರಭಾಕರ ಮೆಂಡನ್,ಕೃಷ್ಣ ಪೂಜಾರಿ ಪಿ,ಪಂಚವರ್ಣ ಯುವಕ ಮಂಡಲದ ನೂತನ ಅಧ್ಯಕ್ಷ ಮನೋಹರ್ ಪೂಜಾರಿ, ಹೊಸಬೆಂಗ್ರೆ ಅಂಗನವಾಡಿ ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ, ಸದಸ್ಯರಾದ ನಿರ್ಮಲ,
ಸಂಜೀವಿನಿ ಸಂಘದ ಅಧ್ಯಕ್ಷೆ ದೀಪಾ ಖಾರ್ವಿ, ಸ್ಥಳೀಯರಾದ ಸುಜಾತಾ ಖಾರ್ವಿ, ಜ್ಯೋತಿ ಜೆ, ಸುಮತಿ ಎ ಬೆನ್ನು ಹಾಗೂ ಸ್ತಿçಶಕ್ತಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.
ಕೋಡಿ ಹೊಸಬೇಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಸ್ವಾಗತಿಸಿ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರೆ, ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿದರು.