



ಡೈಲಿ ವಾರ್ತೆ: 02/JAN/2025


ಹೆಮ್ಮಾಡಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ ದುರಸ್ಥಿಗೆ 3.10 ಲಕ್ಷ ರೂ. ಅನುದಾನ ಬಿಡುಗಡೆ.
NSUI ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಪುರ್ಖಾನ್ ಯಾಸಿನ್ ರವರ ಮನವಿಗೆ ಸ್ಪಂದಿಸಿದ ಎಂ.ಎಲ್.ಸಿ ಮಂಜುನಾಥ್ ಭಂಡಾರಿ
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬೈಂದೂರು ಕ್ಷೇತ್ರ ವ್ಯಾಪ್ತಿಯ ಹೆಮ್ಮಾಡಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ ಸಂಪೂರ್ಣ ಶಿಥಿಲ ಗೊಂಡಿದ್ದು ಸದ್ರಿ ಗ್ರಂಥಾಲಯದ ದುರಸ್ಥಿಗೆ ಅನುದಾನ ಬಿಡುಗಡೆ ಮಾಡಲು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ ಮಂಜುನಾಥ್ ಭಂಡಾರಿ ಯವರಲ್ಲಿ NSUI ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಫುರ್ಖಾನ್ ಯಾಸೀನ್ ರವರು ಮನವಿ ಮಾಡಿದ್ದು, ಸದ್ರಿ ಮನವಿ ಯನ್ನು ಸ್ವೀಕರಿಸಿ ಮನವಿಗೆ ಸ್ಪಂದಿಸಿ ಜಿಲ್ಲಾ ಪಂಚಾಯತ್ ಅನುದಾನ ದಿಂದ 3.10ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ.