ಡೈಲಿ ವಾರ್ತೆ: 03/JAN/2025
ವಿದ್ಯಾರ್ಥಿಗೆ ಸಹಪಾಠಿಗಳಿಂದ ಚಾಕು ಇರಿತ:
ಗಂಭೀರವಾಗಿ ಗಾಯ
ಗೋಕಾಕ: ಶಾಲಾ ಕೊಠಡಿಯಿಂದ ತನ್ನ ಬ್ಯಾಗನ್ನು
ತಂದು ಕೊಡುವಂತೆ ಸಹಪಾಠಿಗೆ ಸೂಚಿಸಿದ ವಿದ್ಯಾರ್ಥಿಗಳು, ಆತ ತರಲು ನಿರಾಕರಿಸಿದ್ದರಿಂದ ಆತನಿಗೆ ಚಾಕುವಿನಿಂದ ಹೊಟ್ಟೆಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ನಡೆದಿದೆ.
ಗಾಯಾಳುವನ್ನು ನಗರದ ನಿವಾಸಿ, 10ನೇ ತರಗತಿ ವಿದ್ಯಾರ್ಥಿ ಪ್ರದೀಪ ಬಂಡಿವಡ್ಡರ (15) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಶಾಮೀಲಾದ ವಿದ್ಯಾರ್ಥಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡ ಶಹರ ಪೊಲೀಸ್ ಮೂಲಗಳು ತಿಳಿಸಿವೆ.