ಡೈಲಿ ವಾರ್ತೆ: 02/JAN/2025
ತೆಕ್ಕಟ್ಟೆಯಲ್ಲಿ ಹ್ಯಾಪಿ ಕಾರ‍್ಸ್ ಶೋರೂಂ ಲೋಕಾರ್ಪಣೆ:
ಇವತ್ತಿನ ಕಾಲಘಟ್ಟದಲ್ಲಿ ವಾಹನಗಳಿಲ್ಲದೇ ನಮ್ಮ ಬದುಕಿಲ್ಲ, ಬದುಕಿಗೊಂದು ವಾಹನ ಎನ್ನುವುದು ಪ್ರಮುಖ ಅಂಗ – ಬಿ. ಅಪ್ಪಣ್ಣ ಹೆಗ್ಡೆ
ಕೋಟ: ಇವತ್ತಿನ ಕಾಲಘಟ್ಟದಲ್ಲಿ ವಾಹನಗಳಿಲ್ಲದೇ ನಮ್ಮ ಬದುಕಿಲ್ಲ, ಬದುಕಿಗೊಂದು ವಾಹನ ಎನ್ನುವುದು ಪ್ರಮುಖ ಅಂಗವಾಗಿದೆ.
ಆದ್ದರಿಂದ ಪ್ರತಿಯೊಬ್ಬರೂ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಕಾರು ಪಡೆಯಲು ಬಯಸುತ್ತಾರೆ. ಅದಕ್ಕಾಗಿ ಜನರ ಅನುಕೂಲಕ್ಕಾಗಿ ಈ ಪೇಟೆಯಲ್ಲಿ ಪ್ರಾಮಾಣಿಕತೆ ಹಾಗೂ ಗುಣಮಟ್ಟದ ಸೇವೆಯಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಈ ಭಾಗದ ಮುದಸ್ಸರ್ ಹಾಗೂ ನಿಹಾಲ್ ಸಹೋದರರು ತೆಕ್ಕಟ್ಟೆ ಕನ್ನುಕೆರೆಯಲ್ಲಿ ಹ್ಯಾಪಿ ಕಾರ‍್ಸ್ ಸಂಸ್ಥೆಯನ್ನು ನಿರ್ಮಿಸಿ ಜನರಿಗೆ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ದರದಲ್ಲಿ ಕಾರು ಖರೀದಿಸುವಾಗೆ ಮಾಡಿದ್ದಾರೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರ ಆಭರಣ ಶೋರೂಮ್‌ನ ಬಳಿ ಗುರುವಾರ ನೂತನವಾಗಿ ಶುಭಾರಂಭಗೊಂಡ ಹ್ಯಾಪಿ ಕಾರ‍್ಸ್ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ಕುಂದಾಪುರವು ಇನ್ನು ಕೆಲವೇ ವರ್ಷದಲ್ಲಿ ಕುಂದಾಪುರ ಹಾಗೂ ಬ್ರಹ್ಮಾವರ ಒಂದೇ ಊರು ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳೆಯುತ್ತಿರುವ ವಾಣಿಜ್ಯ ಕಟ್ಟಡಗಳು.
ಕುಂದಾಪುರವು ಇನ್ನು ಬೆಳೆದು ದೊಡ್ಡ ಮಟ್ಟ ತಲುಪುವಾಗ ತೆಕ್ಕಟ್ಟೆಯಲ್ಲಿ ಈ ಒಂದು ಹ್ಯಾಪಿ ಕಾರ್ ಸಂಸ್ಥೆ ಕೂಡ ಒಂದು ಲ್ಯಾಂಡ್ ಮಾರ್ಕ್ ಆಗಿ ಬೆಳೆಯಬೇಕು ಎಂದು ಹೇಳಿ ಶುಭ ಹಾರೈಸಿದರು.
ಉದ್ಯಮಿ ಆನಂದ್ ಸಿ. ಕುಂದರ್ ಸಂಸ್ಥೆಯ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ ಮುದಸ್ಸರ್ ಹಾಗೂ ನಿಹಾಲ್ ಸಹೋದರರು ಕೇವಲ ಐಸ್ ಕ್ರೀಮ್ ಮಾರಾಟ ಮಾಡಿಕೊಂಡು ಕಷ್ಟದಿಂದ ಜೀವನ ಸಾಗಿಸಿ 15 ವರ್ಷಗಳ ಹಿಂದೆ ಮೂರು ಕಾರಿನೊಂದಿಗೆ ವ್ಯವಹಾರ ಪ್ರಾರಂಭಿಸಿ ಇಂದು ವ್ಯವಸ್ಥಿತವಾದ ಈ ಒಂದು ಸಂಸ್ಥೆ ಸ್ಥಾಪಿಸಬೇಕಾದರೆ ಅವರ ಒಂದು ಕಾರ್ಯ ನಿಷ್ಠೆ ಕಾರ್ಯತತ್ಪರತೆ ಯಾವ ರೀತಿ ಸಾಧನೆ ಮಾಡಬೇಕು ಅಂತ ಹೇಳುವುದು ನಮ್ಮ ಯುವಕರಿಗೆ ಒಂದು ಮಾದರಿ ಯಾಗಿದೆ. ಯಾವುದೇ ಒಂದು ಉದ್ಯೋಗದಲ್ಲಿ ಮುಂದೇ ಬರಬೇಕಾದ್ರೆ ನಮ್ಮಲ್ಲಿ ಪ್ರಾಮಾಣಿಕತೆ ಹಾಗೂ ಸತ್ಯ ಇರಬೇಕು ಅಲ್ಲದೆ ಯಾವುದೇ ವಂಚನೆ ಗುಣ ಇರಬಾರದು. ಅದು ಎಲ್ಲಕ್ಕಿಂತ ಮೇಲಾಗಿ ನಮ್ಮ ಸತತ ಪ್ರಯತ್ನ ಇರಬೇಕು ಇದರಿಂದಾಗಿ
ಖಂಡಿತ ಉದ್ಯೋಗದಲ್ಲಿ ಮುಂದು ಬರಲು ಸಾಧ್ಯ ಎಂದು ಯುವಕರಿಗೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.
ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ವೆಬ್‌ಸೈಟ್‌ನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ. ಶಿವರಾಮ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಟಿ.ಶೋಭನಾ, ಕೊಮೆ ಕೊರವಡಿ ವಿಎಸ್‌ಎಸ್‌ಎಸ್‌ನ ಸಿಇಒ ಗೋಪಾಲ ಪೂಜಾರಿ, ಪ್ರೀ ಓನಡ್ ವೆಹಿಕಲ್ಸ್ ವಿತರಕ ಸಂಘದ ಅಧ್ಯಕ್ಷ ಮೊಹಮ್ಮದ್ದ್ ಅಶ್ರಫ್, ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಕತ್ ಕೆ, ಉದ್ಯಮಿ ಅಬ್ದುಲ್ ಗಫಾರ್ ತೆಕ್ಕಟ್ಟೆ, ಕುಂದಗನ್ನಡ ರಾಯಭಾರಿ ಮನು ಹಂದಾಡಿ, ತೆಕ್ಕಟ್ಟೆ ಅಲ್ ಮದಿನಾ ಜಾಮಿಯಾ ಮಸೀದಿ ಅಧ್ಯಕ್ಷ ಶಾನವಾಜ್, ಸಂಸ್ಥೆಯ ಪಾಲುದಾರರಾದ ಮುದಸ್ಸಾರ್ ಮತ್ತು ನಿಹಾಲ್ ಸಹೋದರರು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.
ಈ ಸಂದರ್ಭ ಇತ್ತೀಚೆಗಷ್ಟೇ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಿ.ಅಪ್ಪಣ್ಣ ಹೆಗ್ಡೆ ಇವರನ್ನು ಹಾಗೂ ಸಂಸ್ಥೆಯ ನಿರ್ಮಾಣದಲ್ಲಿ ಕೈಜೋಡಿಸಿದವರನ್ನು ಗುರುತಿಸಿ ಗೌರವಿಸಲಾಯಿತು.
ಸಂಸ್ಥೆಯ ಪಾಲುದಾರರಾದ ಮುದಸ್ಸರ್ ಪ್ರಾಸ್ತಾವಿಕ ಮಾತನಾಡಿದರು.
ಖ್ಯಾತ ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ಪಾಲುದಾರ ನಿಹಾಲ್ ವಂದಿಸಿದರು.