ಡೈಲಿ ವಾರ್ತೆ: 03/JAN/2025
ಉಡುಪಿ| ಹೊರ ಜಿಲ್ಲೆಯ ಮಧ್ಯ ವ್ಯಸನಿ ಕಾರ್ಮಿಕರಿಂದ ಕಿರಿಕ್
ವರದಿ: ಅಬ್ದುಲ್ ರಶೀದ್ ಮಣಿಪಾಲ
ಕೃಪೆ ಗಣೇಶ್ ರಾಜ್ ಸರಲೇಬೆಟ್ಟು
ಉಡುಪಿ| ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ನಿಲ್ದಾಣದ ಅಕ್ಕಪಕ್ಕದಲ್ಲಿ ಸಂಜೆಯಾಗುತ್ತಲೇ ವಲಸೆ ಮಧ್ಯ ವಸನಿ ಕಾರ್ಮಿಕರಿಂದ ಬೆದರಿಸುವುದು ಸಣ್ಣ ಪುಟ್ಟ ಗಲಾಟೆ ಬೇಕು ಬೇಕಂತ ಕಿರಿಕ್ ಮಾಡೋದು ದಿನಂಪ್ರತಿ ನಡೆಯುತ್ತಾ ಇದೆ.
ಮೊದಮೊದಲು ಅವರವರೆ ಕಚ್ಚಾಡಿಕೊಂಡು ಅವರವರ ಒಳಗೆ ಅಹಿತಕರ ಘಟನೆಗಳು ನಡೆಯುತ್ತಿದ್ದು ಇದೀಗ ಸ್ಥಳೀಯ ಸಾರ್ವಜನಿಕರ ಮೇಲು ಕಿರಿಕ್ ಮಾಡಲು ಆರಂಭಿಸಿದ್ದಾರೆ.
ಈ ಕಿರಿಕ್ ಮಾಡುವ ಮಧ್ಯ ವ್ಯಸನಿಗಳಿಗೆ ಸ್ಥಳೀಯರಾಗಲಿ ಅವರ ಊರಿನ ಇತರ ಕಾರ್ಮಿಕರಾಗಲಿ ಯಾರು ಬೆದರಿಸುವುದು ಗದರಿಸುವುದು ಮಾಡಲು ಹಿಂದೇಟು ಹಾಕುತ್ತಾರೆ ಕಾರಣ ಅವರ ಬಳಿ ಏನಾದರೂ ಆಯುಧ ಅಥವಾ ಕಲ್ಲುಗಳಿಂದ ಹೊಡೆಯುವುದು ಏನಾದರೂ ಮಾಡಿ ಘಾಸಿ ಮಾಡುತ್ತಾರೆ ಸಣ್ಣ ಪುಟ್ಟ ಗಲಾಟೆ ಸಣ್ಣಪುಟ್ಟ ಹಣ ಕಳೆದುಕೊಳ್ಳುವುದರಿಂದ ಯಾರು ಪೊಲೀಸ್ ಕಂಪ್ಲೇಂಟ್ ಕೊಡಲು ಮುಂದೆ ಬರುತ್ತಿಲ್ಲ ಕೋರ್ಟು ಕಚೇರಿ ಎಂದೆಲ್ಲ ಅಲೆದಾಡೋದು ಯಾರು ಎಂದು ಈಗಾಗಲೇ ಈ ಮಧ್ಯ ವ್ಯಸನಿಗಳ ದೇಹವು ಒಳಗಿಂದೊಳಗೆ ಕ್ಷಣಿಸಿರಬಹುದು ಹಾಗಾಗಿ ಅವರನ್ನು ಯಾರು ಮುಟ್ಟಲು ಮುಂದೆ ಬರುವುದಿಲ್ಲ ಮುಂದೆ ಏನಾದರೂ ಅನಾಹುತ ನಡೆದಲ್ಲಿ ತಮ್ಮ ಮೇಲೆ ಅಪ್ಪಾದನೆಗಳು ಬರುವುದರಿಂದ ಹೆದರಿ ಯಾರು ಇವರನ್ನು ಮುಟ್ಟುತ್ತಿಲ್ಲ ಇದನ್ನೇ ಬಂಡವಾಳ ಮಾಡಿಕೊಂಡು ಈ ಮಧ್ಯ ವ್ಯಸನಿಗಳು ಕೆಲವರು ಕೆಲವು ತಂಡಗಳನ್ನು ಕಟ್ಟಿಕೊಂಡು ಯಾರಿಗಾದರೂ ಕಿರಿಕ್ ಮಾಡುತ್ತಾ ಮೊಬೈಲ್ ಎಳೆದುಕೊಳ್ಳುವುದು ಹಲ್ಲೇ ಮಾಡೋದು ಇಂಥದ್ದೆಲ್ಲ ಮಾಡುತ್ತಾ ಇರುತ್ತಾರೆ ಅಲ್ಲದೆ ಸ್ಥಳೀಯ ಪುಂಡು ಪೋಕರಿಗಳು ಇವರಿಗೆ ಬೆಂಗಾವಲಾಗಿ ಇರುವುದರಿಂದ ಇನ್ನಷ್ಟು ಧೈರ್ಯ ಇವರಿಗೆ ಬಂದಿರುತ್ತದೆ.
ರಾತ್ರಿ ಆಗುತ್ತಲೇ ಅಲ್ಲಲ್ಲಿ ಕುಡಿದು ಅಲ್ಲೇ ಊಟ ಬಹಿರ್ದೆಸೆ ಮಾಡಿ ಸ್ಥಳೀಯ ಸ್ಥಳವನ್ನು ಗಲೀಜ್ ಮಾಡಿ ಹಾಕುತ್ತಾರೆ ನರ್ಮ ಬಸ್ ಸ್ಟ್ಯಾಂಡ್ ನಲ್ಲಿ ಸಂಜೆ ಏಳು ಗಂಟೆ ನಂತರ ಬಸ್ ಸಂಚಾರ ಇಲ್ಲದೆ ಇರುವುದರಿಂದ ಬಸ್ಟ್ಯಾಂಡ್ ಖಾಲಿ ಇರುತ್ತದೆ ಹಾಗಾಗಿ ಅಲ್ಲೇ ಮಲಗೋದು ಅಲ್ಲೇ ಊಟ ಅಲ್ಲೇ ಮದ್ಯ ಸೇವನೆ ಅಲ್ಲಿ ಜೂಜಾಡೋದು ಕೂಡ ವಿನಾಕಾರಣ ಗಲಾಟೆ ಮಾಡುವುದು ಗುರಾಯಿಸುವುದು ಅಲ್ಲಲ್ಲಿ ಮಧ್ಯದ ಬಾಡಲಿ ತಿಂದ ವಸ್ತುಗಳನ್ನು ಎಸೆದು ಗಲಾಟೆ ಸೃಷ್ಟಿ ಮಾಡುವುದು ನಡೆಯುತ್ತಿರುತ್ತದೆ ಒಟ್ಟಾರೆ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ
ಕೂಡಲೇ ಪೊಲೀಸ್ ಇಲಾಖೆ ಹಾಗೂ ನಗರಸಭೆ ಇವರನ್ನು ಇಲ್ಲಿಂದ ಓಡಿಸೋ ಕಾರ್ಯ ಮಾಡಬೇಕಾಗಿದೆ.
ಹೊರ ಜಿಲ್ಲೆಯ ಮಧ್ಯ ವ್ಯಾಸನಿ ಕಾರ್ಮಿಕರನ್ನು ಗುರುತಿಸಿ ಗಡಿಪಾರು ಮಾಡಬೇಕು ಅಲ್ಲದೆ ಸ್ಥಳೀಯ ಪುಂಡು ಪೋಕರಿಗಳನ್ನು ಪೊಲೀಸ್ ಪಿರೇಡ್ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯ.