ಡೈಲಿ ವಾರ್ತೆ: 07/JAN/2025
ಕುಂದಾಪುರ ಗಾಂಧಿ ಮೈದಾನ ಸುಂದರಿಕರಣ ಗೊಳಿಸುವ ನಿಟ್ಟಿನಲ್ಲಿ ಶಾಸಕರ ಮನವಿಗೆ ಸ್ಪಂದಿಸಿ -: ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ
ಕುಂದಾಪುರ-: ಜ:07 ಕುಂದಾಪುರದ ಹೃದಯ ಭಾಗದಲ್ಲಿರುವ ಕುಂದಾಪುರ ಗಾಂಧಿ ಮೈದಾನ ಸುಂದರಿಕರಣ ಗೊಳಿಸುವ ನಿಟ್ಟಿನಲ್ಲಿ ಶಾಸಕರ ಮನವಿ ಮೇರೆಗೆ ಇಂದು ಉಡುಪಿ ಜಿಲ್ಲಾಧಿಕಾರಿಯಾದ ಡಾ!! ಕೆ ವಿದ್ಯಾ ಕುಮಾರಿಯವರು ಭೇಟಿ ನೀಡಿದರು. ಗಾಂಧಿ ಮೈದಾನ ಸುತ್ತ ಕಾಂಪೌಂಡ್ ಹಾಲ್ ಕಟ್ಟುವುದು ಹಾಗೂ ವಾಲಿಬಾಲ್ ಕಬಡ್ಡಿ ಕೋರ್ಟ್ ರಚನೆಯ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಜಿಲ್ಲಾಧಿಕಾರಿಗಳ ಜೊತೆ ಸಮಗ್ರವಾಗಿ ಚರ್ಚೆ ನಡೆಸಿದರು. ಕುಂದಾಪುರ: ತಾಲೂಕು ಕೇಂದ್ರದಲ್ಲಿ ಸಮರ್ಪಕವಾಗಿ ಇರುವುದು ಎರಡೇ ಮೈದಾನಗಳು.ಒಂದು ಗಾಂಧಿ ಮೈದಾನ, ಇನ್ನೊಂದು ನೆಹರೂ ಮೈದಾನ. ಗಾಂಧಿ ಮೈದಾನ ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಆಧೀನದಲ್ಲಿದೆ.
ಪುರಸಭೆ ನೆಹರು ಮೈದಾನವನ್ನು ಸ್ವಚ್ಛತೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ನಡೆಸಲು ಅನುವು ಮಾಡಿಕೊಡುವ ಬಗ್ಗೆ ಚರ್ಚಿಸಿದರು.
ಹಾಗೂ ಇದೇ ಸಂದರ್ಭದಲ್ಲಿ ಕುಂದಾಪುರದ ಪುರಸಭಾ ವ್ಯಾಪ್ತಿಯಲ್ಲಿರುವ ಖಾರ್ವಿಕೇರಿ ಹಾಗೂ ಕೋಡಿ ಸಮುದ್ರದ ತೀರದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯ ಹೊಂದಿ ಹಕ್ಕು ಪತ್ರ ಹೊಂದದೇ ಇರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಮುಂದಿನ ದಿವಸ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಶಾಸಕರು ಚರ್ಚಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ,,ಪುರಸಭೆಯ ಉಪಾಧ್ಯಕ್ಷೆ ವನಿತ ಎಸ್.ಬಿಲ್ಲವ, ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ, ಕ್ರೀಡಾಧಿಕಾರಿ ಕುಸುಮಕರ ಶೆಟ್ಟಿ ,, ಪುರಸಭಾ ಮುಖ್ಯ ಅಧಿಕಾರಿ ಆನಂದ್.ಜಿ. ಗುರುಪ್ರಸಾದ್, ಅಂಜನಿ ಗೌಡ, ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ,,ಸುರೇಶ ಶೆಟ್ಟಿ ಗೋಪಾಡಿ,ಸುನಿಲ್ ಶೆಟ್ಟಿ ಹೇರಿಕುದ್ರು,
ಪ್ರಕಾಶ್ ಖಾರ್ವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.