ಡೈಲಿ ವಾರ್ತೆ: 07/JAN/2025

ಡೆತ್ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬೆಂಗಳೂರಿನ ಉದ್ಯಮಿ

ಬೆಂಗಳೂರು: ಉದ್ಯಮಿಯೊಬ್ಬರು ಡೆತ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಉದ್ಯಮಿ ಕಲಾಲ್ ದತ್ತ(40) ಎಂದು ಗುರುತಿಸಲಾಗಿದೆ.

ಜ. 6 ರಂದು ಸೋಮವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದು, ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಸದ್ಯಕ್ಕೆ ಸ್ಥಳಕ್ಕೆ ಹುಳಿಮಾವು ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್​ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಹಾಗೇ ಡೆತ್ ನೋಟ್ ನಲ್ಲಿ ಪತ್ನಿಗೆ ಕ್ಷಮೆ ಕೇಳಿದ್ದಾರೆ. ಇನ್ನು ಈ ಸಂಬಂಧ ಮೃತ ಕಲಾಲ್ ದತ್ತ ಸಜಿನಿ, ತಮ್ಮ ಪತಿಯ ಬ್ಯುಸಿನೆಸ್​ ಪಾರ್ಟನರ್​​ ವಿರುದ್ಧ ದೂರು ದಾಖಲಿಸಿದ್ದಾರೆ.