ಡೈಲಿ ವಾರ್ತೆ: 09/JAN/2025

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಶಾಲೆಯಲ್ಲಿ ಮಕ್ಕಳ ಸಂತೆ.

ರಂಗೇರಿದ ಮಕ್ಕಳ ಸಂತೆ_ ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅಡರಕಟ್ಟಿಯಲ್ಲಿ ಮೆಟ್ರಿಕ್ ಮೇಳ/ಮಕ್ಕಳ ಸಂತೆ ನಡೆಯಿತು. ಒಂದರಿಂದ ಏಳನೇ ವರ್ಗ ದಲ್ಲಿ ಕಲಿಯುತ್ತಿರುವ 200 ಮಕ್ಕಳ ಪೈಕಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂತೆಯಲ್ಲಿ ಪಾಲ್ಗೊಂಡು ವ್ಯಾಪಾರ ವಹಿವಾಟು ನಡೆಸಿದರು. ಮಕ್ಕಳು ತರಕಾರಿ, ಕಿರಾಣಿ ಆಟಿಕೆ ಸಿದ್ಧ ಉಡುಪುಗಳನ್ನು ಸಾಮಾನುಗಳನ್ನು ಸಂತೆಯಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುವಂತೆ ಮಾಡಿದ್ದು ವಿಶೇಷವಾಗಿತ್ತು, ಅದರಲ್ಲೂ ವ್ಯಾಪಾರ ಮಾಡುತ್ತಿದ್ದ ಮಕ್ಕಳ ಗ್ರಾಹಕರನ್ನು ಕರೆಯುತ್ತಿದ್ದ ರೀತಿ ಅಚ್ಚರಿ ಮೂಡಿಸುವಂತಿತ್ತು. ಶಾಲೆಯ ಆವರಣದಲ್ಲಿ ಈರುಳ್ಳಿ, ಬೀನ್ಸ್ ಚವಳಿ ಕಾಯಿ ಹಣ್ಣು ಹಂಪಲುಗಳು ಎಗರೈಸ್ ತಿನಿಸುಗಳನ್ನು ಸೇರಿದಂತೆ ಎಲ್ಲಾ ರೀತಿಯ ತರಕಾರಿ ಸೊಪ್ಪುಗಳನ್ನು ಮಕ್ಕಳ ಮಾರಾಟ ಮಾಡುತ್ತಿದ್ದ ರೀತಿಗೆ ಪಾಲಕರು ಮತ್ತು ಶಿಕ್ಷಕರು ಬೆರಗಾಗಿದ್ದರು ಗ್ರಾಮದ ನಿವಾಸಿಗಳು ಸಂತೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಸಂತೆ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಶ್ರೀ ಬಿ ಎಸ್ ಹರ್ಲಾಪುರ ಅವರು ಮಾತನಾಡುತ್ತಾ ಮಕ್ಕಳ ಜ್ಞಾನಕ್ಕೆ ಮಕ್ಕಳ ಮೆಟ್ರಿಕ್ ಮೇಳ ನಿಜ ಜೀವನವನ್ನು ತಿಳಿಯಲು ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಶ್ರೀಮತಿ ಜಯಶ್ರೀ ವೀರೇಶ್ ಭಂಗಿ, ಮುಖ್ಯ ಶಿಕ್ಷಕಿ ಶ್ರೀಮತಿ ಎಸ್ ಹೆಚ್ ಉಮಚಗಿ, ಸಿಆರ್ಪಿ ಶಿವಾನಂದ ಅಸುಂಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ಖಜಾಂಚಿ ಶ್ರೀ ಬಿ ಬಿ ಯತ್ನಳ್ಳಿ, ಉಪಾಧ್ಯಕ್ಷರು ಶ್ರೀಮತಿ ಎಲ್ ಎನ್ ನಂದೆನ್ನವರ, ಶ್ರೀ ಡಿ ಡಿ ಲಮಾಣಿ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ ಎಸ್ ಹಿರೇಮಠ ಶ್ರೀ ಮಾಂತೇಶ ಹವಳದ, ರವಿಕುಮಾರ ದೇವರಮನಿ, ಮೌನೇಶ ಶಿರಹಟ್ಟಿ ಹಾಗೂ ಶಾಲಾ ಸಿಬ್ಬಂದಿಯವರು, ಶ್ರೀ ರಂಭಾಪುರಿ ಪ್ರೌಢಶಾಲೆಯ ಪ್ರಧಾನ ಗುರುಮತೆಯರು, ಎಸ್‌ಡಿಎಂಸಿ ಸದಸ್ಯರು, ಊರಿನ ಗಣ್ಯರು, ಶಿಕ್ಷಣ ಪ್ರೇಮಿಗಳು ತಾಯಂದಿರು ಮಕ್ಕಳು ಹಾಜರಿದ್ದರು.