ಡೈಲಿ ವಾರ್ತೆ: 13/JAN/2025

ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ: ಡಾ. ವಿರೂಪಾಕ್ಷ ದೇವರಮನೆ

ಉಡುಪಿ: ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮ ಪ್ರಯುಕ್ತ ಉಪ್ಪೂರು ಸರಕಾರಿ ಪ್ರೌಢ ಶಾಲೆಯ SSLC ವಿದ್ಯಾರ್ಥಿಗಳಿಗೆ ನಡೆದ “ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ” ದಲ್ಲಿ ಉಡುಪಿಯ ಎ . ವಿ. ಬಾಳಿಗ ಆಸ್ಪತ್ರೆ ಯ ಪ್ರಸಿದ್ಧ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ವಿದ್ಯಾರ್ಥಿಗಳಿಗೆ ಕಾರ್ಯಗಾರ ನಡೆಸುತ್ತಾ, ಪರೀಕ್ಷೆ ಒಂದು ವ್ಯವಸ್ಥೆ, ಆತಂಕ ಬೇಡ, ಜೀವನ ಎನ್ನುವ ಪರೀಕ್ಷೆ ಅದಕ್ಕಿಂತ ದೊಡ್ಡದು,ಪರೀಕ್ಷೆ ಎನ್ನುವುದು ಒಂದು ಹಬ್ಬ. ಧೈರ್ಯದಿಂದ ಎದುರಿಸಿ ಜೀವನದ ಗುರಿ ಸಾಧಿಸಿ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ , ಉಪ್ಪೂರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಧ್ಯಾ ಸರಸ್ವತಿ ಭಟ್ ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯ ಸದಸ್ಯರಾದ ರವಿಂದ್ರ ಕುಮಾರ್ , ಶಕುಂತಲಾ, ಕೇಶವ್, ವಿದ್ಯಾರ್ಥಿಗಳ ಪೋಷಕರು, ಶಾಲಾ ಅದ್ಯಾಪಕರುಗಳು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿ, ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಸರ್ವರಿಗೂ ವಂದಿಸಿದರು.