ಡೈಲಿ ವಾರ್ತೆ: 14/JAN/2025

ಅಂಕೋಲಾ| ಪೊಲೀಸ್ ಠಾಣೆಯ ಕರ್ತವ್ಯ ನಿರತ ಹವಲ್ದಾರ್ ನಿತ್ಯಾನಂದ ಕಿಂದಾಳಕರ ನಿಧನ

ಅಂಕೋಲಾ| ಇಲ್ಲಿನ ಪೊಲೀಸ್ ಠಾಣೆಯ ಕರ್ತವ್ಯ ನಿರತ ಹವಲ್ದಾರ್ ನಿತ್ಯಾನಂದ ಕಿಂದಾಳಕರ (52) ಮಂಗಳವಾರ ನಿಧನಗೊಂಡಿದ್ದಾರೆ.

ಅವರು ಸೋಮವಾರ ರಾತ್ರಿ ಗಸ್ತಿನಲ್ಲಿರು ವೇಳೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ತಕ್ಷಣ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲದಾಯಕವಾಗದೇ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಪತ್ನಿ ಮತ್ತು ಓರ್ವ ಪುತ್ರಿ ಇದ್ದಾರೆ. ಪಿಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿ ವರ್ಗದವರು ಅಂತಿಮ ದರ್ಶನ ಪಡೆದರು. ಮೃತರಿಗೆ ಬುಧವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ನಿತ್ಯಾನಂದ ಕಿಂದಾಳಕರ ಅವರು ಕಳೆದ 2ವರ್ಷದಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.