ಡೈಲಿ ವಾರ್ತೆ: 15/JAN/2025
ಜ. 17ರಿಂದ ಕಟಪಾಡಿ ದರ್ಗಾ ಉರೂಸ್
ಕಟಪಾಡಿ: ಉಡುಪಿ ಜಿಲ್ಲೆಯ ಕಟಪಾಡಿ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹಿ (ಖ.ಸಿ.) ಅವರ ಉರೂಸ್ ಯಾನೆ ಝಿಯಾರತ್ ಸಮಾರಂಭ ಜ.17ರಿಂದ 19 ರ ತನಕ ನಡೆಯಲಿದೆ.
ಜ.17 ರಂದು ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹಿ (ಖ.ಸಿ.)ಅವರ ದರ್ಗಾ ದಲ್ಲಿ ಕೂಟು ಝಿಯಾರತ್ ನಂತರ ಧ್ವಜಾ ರೋಹಣ ಕಾರ್ಯಕ್ರಮ ನಡೆಯಲಿದೆ. ಕಟಪಾಡಿ ಮಸೀದಿ ಖತೀಬ ಅಲ್ದಾಜ್ ಕೆ.ಪಿ. ಬಶೀರ್ ಮದನಿ ದುಆ: ನೆರೆವೇರಿಸಲಿದ್ದಾರೆ. ಮಸೀದಿ ಅಧ್ಯಕ್ಷ ಬಿ.ಎಂ. ಮೊಹಿದ್ದೀನ್ ಎ. ಆರ್. ಉಡುಪಿ ಧ್ವಜಾರೋಹಣ ನಡೆಸಲಿದ್ದಾರೆ.
ಸಂಜೆ ಇಶಾ ನಮಾಝಿನ ಬಳಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಜಲಾಲಿಯ್ಯ ದಿಕ್ಕರ್ ಮಜ್ಜಿಲಿಸ್ ನಡೆಯಲಿದೆ. ಮುಹಮ್ಮದೀಯ ಮೊಹಲ್ಲಾ ಮಲ್ಲಾರು ಇಲ್ಲಿನ ಮೌಲಾನಾ ಲುಕ್ಮಾನ್ ರಝಾ ಮಿಸ್ವಾಹಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್
ಕುಂಬೋಳ್ ಜಲಾಲಿಯ್ಯ ದಿಕ್ಕುರ್ ನೇತೃತ್ವ ವಹಿಸಲಿದ್ದಾರೆ. ಚೊಕ್ಕಾಡಿ ಮಸೀದಿ ಧರ್ಮಗುರು ಮೌಲಾನಾ ಹಾಫಿಝ್ ಮುಹಮ್ಮದ್ ಶೇಝಾಝ ಅನ್ಸಾರಿ, ಕಟಪಾಡಿ ಮದ್ರಸದ ಸದರ್ ಗುರು ಯೂಸೂಫ್ ಝಯ್ರಿ ಉಪಸ್ಥಿತರಿರುವರು.
ಜ.18ರಂದು ಸಂಜೆ ಮಗ್ರಿಬ್ ನಮಾಝ ಬೃಹತ್ ಸಂದಲ್ ಮೆರವಣಿಗೆ ನಡೆಯಲಿದೆ. ಇಶಾ ನಮಾಝಿನ ಬಳಿಕ ಸಮರೋಪ ಸಮಾರಂಭ ಜರುಗಲಿದೆ.
ಕಟಪಾಡಿ ಮಸೀದಿ ಅಧ್ಯಕ್ಷ ಬಿ.ಎಂ. ಮೊಹಿದ್ದೀನ್ ಎ.ಆರ್. ಧ್ವಜಾರೋಹಣ ನಡೆಸಲಿದ್ದು, ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗಿ ಮುಹಮ್ಮದ್ ಅಝರಿ ಪೇರೊಡ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಕಟಪಾಡಿ ಮಸೀದಿ ಖತೀಬರಾದ ಅಲ್ಟಾಜ್ ಕೆ.ಪಿ. ಬಶೀರ್ ಮದನಿ ಮತ ಪ್ರಭಾಷಣ ಮಡಲಿದ್ದಾರೆ. ಜ.19ರಂದು ಮೌಲೀದ್ ಮಜ್ಜಿಸ್ ನಡೆಸಲಿದ್ದಾರೆ.