ಡೈಲಿ ವಾರ್ತೆ: 16/JAN/2025
ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್
ಪ್ರಸ್ತುತ ಪಡಿಸುವ ದ್ವಿತೀಯ ವರ್ಷದ ಹೆಜ್ಜೆ ಗುರುತು ಹಾಗೂ
ಸಾಧಕರ ಸಮಾಗಮ -2025 ಕ್ಕೆ ದಿನ ಗಣನೆ
⏩ ಜನವರಿ 19ಕ್ಕೆ 65 ನಾಡಿನ ಪ್ರಸಿದ್ಧ ಸಾಧಕರಿಗೆ ಗೌರವಾರ್ಪಣೆ…
⏩ ಕರಾವಳಿ ಜನತೆಯ ಅಚ್ಚುಮೆಚ್ಚಿನ ಡೈಲಿ ವಾರ್ತೆ ಕನ್ನಡ ನ್ಯೂಸ್,ವೆಬ್ಸೈಟ್ ಸಹಭಾಗಿತ್ವದಲ್ಲಿ
- ವರದಿ : ಇಬ್ರಾಹಿಂ ಬ್ಯಾರಿ ಸಂಪಾದಕರು, ಡೈಲಿ ವಾರ್ತೆ ಸಹಕಾರ
ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಪತ್ರಕರ್ತರು.
ಉಡುಪಿ: ಪಬ್ಲಿಕ್ ಫೈಲ್ ಪತ್ರಿಕೆ ಮತ್ತು ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಪ್ರಸ್ತುತ ಪಡಿಸುವ ದ್ವಿತೀಯ ವರ್ಷದ ಹೆಜ್ಜೆ ಗುರುತು ಹಾಗೂ ಸಾಧಕರ ಸಮಾಗಮ -2025 ಕಾರ್ಯಕ್ರಮವು ಜ. 19 ರಂದು ಭಾನುವಾರ ಬೆಳಿಗ್ಗೆ 10. 00 ಗಂಟೆಗೆ ಉಡುಪಿ ಶಾರದಾ ಮಂಟಪ ರಸ್ತೆಯಲ್ಲಿರುವ ಬೀಡಿನಗುಡ್ಡೆಯ ಯಕ್ಷಗಾನ ಕಲಾರಂಗ, ಇನ್ಫೋಸಿಸ್ ಫೌಂಡೇಶನ್ ನ ಹವಾ ನಿಯಂತ್ರಿತ, ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10-00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಬ್ಲಿಕ್ ಫೈಲ್ ಪಾಕ್ಷಿಕ ಪತ್ರಿಕೆಯ ಗೌರವ ಸಂಪಾದಕರಾದ
ಶ್ರೀ ಸತೀಶ್ ಶೆಟ್ಟಿ ಮುಟ್ಲುಪಾಡಿ ವಹಿಸಲಿದ್ದಾರೆ,
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ
ಶ್ರೀ ದಿನಕರ್ ಹೇರೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉದ್ಯಮಿಗಳಾದ ಶ್ರೀ ಆನಂದ್ ಸಿ. ಕುಂದರ್ ಅವರು
ಪಬ್ಲಿಕ್ ಫೈಲ್ ಪತ್ರಿಕೆ, ಸುದ್ದಿ ಮನೆ ವಾರ ಪತ್ರಿಕೆ ಕಾರ್ಯಕ್ರಮದ ವಿಶೇಷ ಸಂಚಿಕೆ ಅನಾವರಣಗೊಳಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಉಡುಪಿ ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀ ಗುರುರಾಜ್ ಪಿ. ಆರ್., ನಿವೃತ್ತ ಉಡುಪಿ ಜಿಲ್ಲಾ ಮೂಳೆ ಶಸ್ತ್ರಚಿಕಿತ್ಸೆ ತಜ್ಞರಾದ ಡಾ| ಮದುಸೂದನ್ ನಾಯಕ್, ಕರಾವಳಿ ಮಾರುತ ಪತ್ರಿಕೆಯ ಸಂಪಾದಕರಾದ ಶ್ರೀ ಸುದೇಶ್ ಕುಮಾರ್ ಮಂಗಳೂರು, ಉದ್ಯಮಿಗಳು, ಮುಂಬೈ ಬಂಟರ ಸಂಘ ಜೊತೆ ಕಾರ್ಯದರ್ಶಿಯಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರೆ,, ಕಲ್ಲಡ್ಕ, ಬಂಟ್ವಾಳ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶ್ರೀ ಶಿವಪ್ರಸಾದ್,
ಗೌರವ ಉಪಸ್ಥಿತಿಯಲ್ಲಿ
ಬೋಳ ಶ್ರೀ ಪ್ರಶಾಂತ್ ಕಾಮತ್, ಉದ್ಯಮಿಗಳು ಕಾರ್ಕಳ, ಶ್ರೀ ಜಯಕರ ಶೆಟ್ಟಿ ಮೇಲ್ಮನೆ,ಮುಟ್ಲುಪಾಡಿ, ಉದ್ಯಮಿಗಳು ಮುಂಬೈ,, ನೀಲಾವರ ಶ್ರೀ ಸುರೇಂದ್ರ ಅಡಿಗ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲೆ ಶ್ರೀ ಬಾಲಕೃಷ್ಣ ಕೊಟ್ಟಾರಿ, ಅಧ್ಯಕ್ಷರು,, ಶ್ರೀ ಸೂರ್ಯನಾರಾಯಣ ದೇವಸ್ಥಾನ, ಜೀರ್ಣೋದ್ಧಾರ ಸಮಿತಿ, ಮಂಗಳೂರು,ಶ್ರೀ ರವಿ ಕಟ್ಪಾಡಿ , ಸಮಾಜ ಸೇವಕರು.
ಅತಿಥಿ ಅಭ್ಯಾಗತರಾಗಿ
ಶ್ರೀ ಸೀತಾರಾಮ ಹೆಗ್ಡೆ ಮಂಡಾಡಿ ಮನೆ,
ನಿವೃತ್ತ ಬ್ಯಾಂಕ್ ಉದ್ಯೋಗಿ, ಆಡಳಿತ ಮಂಡಳಿ, ಶ್ರೀ ಮಹಿಷಾಮರ್ದಿನಿ ದೇವಸ್ಥಾನ, ಚಾರ
ಶ್ರೀ ಶಾಮ್ ಸುಂದರ್ ನ್ಯಾರಿ, ಸಾಲಿಗ್ರಾಮ, ಕಾನೂನು ಸಲಹೆಗಾರರು, ಪಬ್ಲಿಕ್ ಫೈಲ್ ಪತ್ರಿಕೆ, ಶ್ರೀ ರಾಘವೇಂದ್ರ ಮಯ್ಯ, ಹಾಲಾಡಿ, ಖ್ಯಾತ ಯಕ್ಷಗಾನ ಭಾಗವತರು, ಶ್ರೀ ರಾಜಶೇಖರ್ ಕೆ., ಸುದ್ದಿ ಸಂಪಾದಕರು, ಪಬ್ಲಿಕ್ ಫೈಲ್ ಪತ್ರಿಕೆ, ಬೆಂಗಳೂರು,
ವಿಶೇಷ ಆಹ್ವಾನಿತರಾಗಿ
ಶ್ರೀಮತಿ ರಾಧ ಕೊಲ್ಲಿ, ಇಂಟರ್‌ನ್ಯಾಷನಲ್ ಹ್ಯೂಮನ್ ರೈಟ್ಸ್ ಅಸೋಸಿಯೇಶನ್ (ರಿ.)ಮತ್ತು ನ್ಯಾಶನಲ್ ಪ್ರೆಸಿಡೆಂಟ್ ಫಾರ್ ವುಮೆನ್ ಸೆಲ್, ನವದೆಹಲಿ ಇವರು ಭಾಗವಹಿಸಲಿದ್ದಾರೆ.
ಪಬ್ಲಿಕ್ ಫೈಲ್ ಪತ್ರಿಕೆಯ ಸಂಪಾದಕರಾದ ಎಂ.ಎನ್. ಕೊಠಾರಿ ಸಾರಥ್ಯ ವಹಿಸಲಿದ್ದಾರೆ.
ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯಕ್ರಮದ ಸಂಚಾಲಕರಾದ ಹಾಗೂ ಪಬ್ಲಿಕ್ ಫೈಲ್ ಪತ್ರಿಕೆಯ ರಾಜ್ಯ ಪ್ರಧಾನ ವರದಿಗಾರರಾದ
ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ, ಇವರು ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ನಡೆಯಲಿದೆ. ಮಧ್ಯಾಹ್ನ ಭೋಜನ ವಿರಾಮ, ಗಂಟೆ 2-30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಪಬ್ಲಿಕ್ ಫೈಲ್ ಆಡಳಿತ ಮಂಡಳಿ ಹಾಗೂ ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.
“ಡೈಲಿ ವಾರ್ತೆ” ಕನ್ನಡ ನ್ಯೂಸ್ ವೆಬ್ ಪೋರ್ಟಲ್ ಕಾರ್ಯಕ್ರಮದ ವೆಬ್ಸೈಟ್ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.