



ಡೈಲಿ ವಾರ್ತೆ: 27/JAN/2025


ನೇರಳಕಟ್ಟೆ : ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ದ.ಕ.ಜಿ.ಪಂ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪಿ.ಕೆ.ರಶೀದ್ ಪರ್ಲೊಟ್ಟು ಧ್ವಜಾರೋಹಣ ನೇರವೇರಿಸಿದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ, ಲಕ್ಷ್ಮೀ, ಎಸ್ಡಿಎಂಸಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಅತಾವುಲ್ಲಾ ನೇರಳಕಟ್ಟೆ, ಚಂದ್ರಶೇಖರ ಪೆರಾಜೆ, ರಶೀದ್ ಪಂತಡ್ಕ, ಮಸೂದ್ ಹಾಜಿ ಕೊಡಾಜೆ, ವೇದಾವತಿ, ಲತಾ, ಸೌಮ್ಯ, ಭಾರತಿ, ಮುನೀರಾ, ಆಯಿಷಾ, ನಝ್ರೀನಾ, ಸಕೀನಾ, ಅಪ್ಸಾ, ಶಿಕ್ಷಕಿಯರಾದ ಶೋಭ, ಆಯಿಷಾ, ಲೀಲಾವತಿ, ಅನಿತಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಕವಾಯತು, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ಸಹ ಶಿಕ್ಷಕಿ ಯಶೋದ ವಂದಿಸಿದರು. ಗೀತಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.