ಡೈಲಿ ವಾರ್ತೆ: 01/ಫೆ /2025

ಅಂಕೋಲಾ|ಗ್ರಾಹಕರ ಖಾತೆಗೆ ಕೋಟ್ಯಂತರ ರೂಪಾಯಿ ಕನ್ನ ಹಾಕಿದ ವ್ಯವಸ್ಥಾಪಕ: ಬೆಳಗಾವಿಯಲ್ಲಿ ಸಿಐಡಿ ಪೊಲೀಸರ ವಶಕ್ಕೆ

ವರದಿ: ವಿದ್ಯಾಧರ ಮೊರಬಾ

ಅಂಕೋಲಾ : ಇಲ್ಲಿಯ (ಸಿಂಡಿಕೇಟ್) ಕೆನರಾ ಬ್ಯಾಂಕ್ 2ನೇ ಶಾಖೆಯಲ್ಲಿ ವ್ಯವಸ್ಥಾಪಕನೊಬ್ಬನು ವಿವಿಧ ಸ್ವಸಾಯ ಸಂಘದ ಗ್ರಾಹಕರ ಖಾತೆಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಕಳೆದ ಎರಡು ವರ್ಷದಿಂದ ತಲೆಮರೆಸಿಕೊಂಡ ಗದಗ ಜಿಲ್ಲೆಯ ಹುಲಕೋಟಿಯ ವೆಂಕಟೇಶ ಮಜ್ಜಿಗುಡ್ಡನನ್ನು ಗುರುವಾರ ಸಿಐಡಿ ಪೊಲೀಸರು ಬೆಳಗಾವಿಯಲ್ಲಿ ವಶಕ್ಕೆ ಪಡೆದು, ಕೆನರಾ ಬ್ಯಾಂಕ್‌ಗೆ ಕರೆತಂದು ತನಿಖೆ ಕೈಗೊಂಡಿರುವ ಘಟನೆ ಶನಿವಾರ ನಡೆದಿದೆ.

ವೆಂಕಟೇಶ ಮಜ್ಜಿಗುಡ್ಡ ಈತನು ಕೆಲ ವಿವಿಧ ಸ್ವಸಾಯ ಸಂಘದವರಿಗೆ ಸಾಲದ ಖಾತೆ ಮುಕ್ತಾಯ ಗೊಳಿ ಸಿದ ಸಂದರ್ಭದಲ್ಲಿ ಹೊಸ ಸಾಲದ ಖಾತೆ ತೆರೆದು ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾನೆ ಎನ್ನುವುದು ಬ್ಯಾಂಕಿನ ಹಿರಿಯ ಅಧಿಕಾರಿಯವರಿಗೆ ಲೆಕ್ಕಪತ್ರ ತಪಾಸಣೆ ವೇಳೆಯಲ್ಲಿ ಕಂಡುಬಂದಿದ್ದು, ಹೀಗೆ 2 ಕೋಟಿಕ್ಕಿಂತ ಹೆಚ್ಚು ವಂಚಿಸಿದ್ದಾನೆ ಎನ್ನಲಾಗಿದೆ. ಬ್ಯಾಂಕಿನ ಇತರೆ ಸಿಬ್ಬಂದಿಗಳ ಐಡಿ ಬಳಸಿ ಬ್ಯಾಂಕ್‌ ಹಾಗೂ ಗ್ರಾಹಕರಿಗೆ ವಂಚಿಸಿರುವ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕೋಟ್ಯಾಂತರ ರೂ. ಹಣದ ಅಪರತಪರ ಆಗಿದ್ದರಿಂದ ಕಳೆದ ಮೂರು ತಿಂಗಳ ಹಿಂದಷ್ಟೇ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪಿಸಲಾಗಿತ್ತು.
ಎನ್.ಜಿ.ಓ ನಿರ್ಲಕ್ಷ್ಯ: ದುಡಿಯುವ ವರ್ಗಗಳ ಬಡ ಮಹಿಳೆಯರ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸ್ವಾವಲಂಬನೆ, ಹಣಕಾಸಿನ ಶಿಸ್ತು ಕಲಿಸಿ ಬ್ಯಾಂಕ್‌ ವಹಿವಾಟಿನ ಕುರಿತು ಉಸ್ತುವಾರಿವಹಿಸಿ ಅವರ ಅಭಿ ವೃದ್ಧಿಗೆ ನೆರವಾಗುವುದಕ್ಕಾಗಿ ಉಸ್ತುವಾರಿ ಮಾಡಬೇಕಾದ ಕೆಲ ಎನ್.ಜಿ.ಓ.ಗಳ ದಿವ್ಯ ನಿರ್ಲಕ್ಷ್ಯ ವಂಚಕನಿ ಗೆ ವರದಾನವಾಗಿರುವುದು ಪ್ರಕರಣಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ. ಈ ಪ್ರಕರಣವು ಸಿಐಡಿ ಅವರ ತನಿ ಖೆಯಲ್ಲಿ ನಿಖರವಾದ ಶಾಮೀಲಾದವರ ಹೆಸರು ಕೂಡ ಬೆಳಕಿಗೆ ಬಂದಿದೆ ಎನ್ನಲಾಗಿದೆ. ವೆಂಕಟೇಶ ಮಜ್ಜಿಗುಡ್ಡ ಅವರಿಂದ ಪಟ್ಟಣದ ಕೆಲ ಹಣವಂತರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಇವರನ್ನು ಸಹ ಸಿಐಡಿ ತನಿಖೆಗೆ ಒಳಗಾಗಲಿದ್ದಾರೆ ಎಂದು ಬಲ್ಲಮೂಲ ತಿಳಿಸಿದೆ.
ಸಿಐಡಿ ಡಿವೈಎಸ್ಪಿ ಆರ್.ಎಸ್.ಜಾಗೀದಾರ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದೆ. ಈ ಸಂದರ್ಭದಲ್ಲಿ ಸಿಐಡಿ ಇನ್‌ಪೆಕರ್ ಮತು ಸಿಬ್ಬಂದಿಗಳು ಹಾಗೂ ಅಂಕೋಲಾ ಪೊಲೀಸ್‌ ಸಿಬ್ಬಂದಿ ಓಮು ನಾಯ್ಕ, ರಾಜೇಶ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.
ಸ್ಟೇಟಸ್