ಡೈಲಿ ವಾರ್ತೆ: 02/ಫೆ /2025

ಕುಂದಾಪುರ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಮಾತೃವಂದನಾ ಕಾರ್ಯಕ್ರಮ:
ತಾಯಿ ಬದುಕಿನ ಸರ್ವಸ್ವ: ಎನ್. ಆರ್. ದಾಮೋದರ ಶರ್ಮ

ಕುಂದಾಪುರ: ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು, ಈ ನಿಟ್ಟಿನಲ್ಲಿ ನಮಗೆ ಆಂಗಿಕವಾಗಿ ಸಿಗುವ ಈ ಸಂತಸ ಅಂತರಂಗದಲ್ಲಿನ ಅನುಭವ ನಮ್ಮನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಬಲ್ಲದು. ಮನುಷ್ಯನ ಬದುಕು ಭಾವ, ರಾಗ, ತಾಳ ಮೇಳೈಸುವ ಸಂಗೀತವಾಗಬಹುದಾದರೆ ಅದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಎನ್. ಆರ್. ದಾಮೋದರ ಶರ್ಮ ಬಾರಕೂರು ಅವರು ಹೇಳಿದರು.
ಅವರು ಫೆ.1ರಂದು ಶನಿವಾರ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಸುಣ್ಣಾರಿ, ಕುಂದಾಪುರ (ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೆಬಲ್‌ ಟ್ರಸ್ಟ್ ಕುಂದಾಪುರದ ಘಟಕ) ಇವರ ಆಶ್ರಯದಲ್ಲಿ ನಡೆದ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದರಲ್ಲೂ ಭಗವಂತನನ್ನು ಕಾಣುವ, ದೈವತ್ವದ ಇರುವಿಕೆಯನ್ನು ಅರ್ಥ ಮಾಡಿಕೊಂಡು ಪ್ರಾಚೀನರು ಹೇಳಿದಂತಹ ಸತ್ಯವನ್ನೇ ಒಪ್ಪಿಕೊಂಡು ಬದುಕುತ್ತೇವೆ. ತಾಯಿ ಬದುಕಿನ ಸರ್ವಸ್ವ ಈ ಬದುಕಿನ ಯಶಸ್ಸಿಗೆ ಪ್ರೇರಣೆಯೇ ತಾಯಿ ಎಂದು ಎನ್. ಆರ್. ದಾಮೋದರ ಶರ್ಮ ಹೇಳಿದರು.

ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೆಬಲ್‌ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಯಿ ತನ್ನ ಮಗುವನ್ನು ಹೊತ್ತು ಹೆತ್ತು ಸಲಹುತ್ತಾ ಒಂದು ರೂಪಕ್ಕೆ ತರುತ್ತಾಳೆ. ಜತೆಗೆ ತಂದೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.
ಮಕ್ಕಳು ತಮ್ಮ ಜೀವನದಲ್ಲಿ ನಮ್ಮ ತಂದೆ ತಾಯಿಯನ್ನು ನೆನಪಿಸಿ ಕೊಂಡರೆ ಮಾತ್ರ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ.
ಪ್ರಸ್ತುತ ಬದಲಾದ ಕಾಲಮಾನದಲ್ಲಿ ಮಕ್ಕಳಿಗೆ ಕಲಿಕೆಯ ಜತೆಗೆ ಗುರು ಹಿರಿಯರನ್ನು ಪೂಜ್ಯ ಭಾವನೆಗಳಿಂದ ನೋಡುವ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಮಹತ್ವದ ಕಾರ್ಯವಾಗಬೇಕಾಗಿದೆ ಎಂದರು.

ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು.

ಈ ಸಂದರ್ಭ ಎನ್ ಆರ್ ದಾಮೋದರ ಶರ್ಮಾ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿ ದೀಪಾ ಎಂ.ಹೆಗ್ಡೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ, ಕುಂದಾಪುರ ಇದರ ಪ್ರಾಂಶುಪಾಲ ನಾಗರಾಜ ಶೆಟ್ಟಿ, ಮುಖ್ಯೋಪಾಧ್ಯಾಯಿನಿ
ವಿದ್ಯಾರ್ಥಿಗಳು ತಂದೆತಾಯಿಗೆ ಪಾದಪೂಜೆಗೈದು, ನಮಿಸಿ ಅವರ ಪ್ರೀತಿ, ಶ್ರಮವನ್ನು ಸ್ಮರಿಸಿದರು.

ಸರೋಜಿನಿ ಪಿ. ಆಚಾರ್ಯ ಹಾಗೂ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಉಪನ್ಯಾಸಕ ಶ್ರೀನಿವಾಸ ವೈದ್ಯ. ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯಾ ಶೆಟ್ಟಿ ಪರಿಚಯಿಸಿ, ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ವಂದಿಸಿದರು.