ಡೈಲಿ ವಾರ್ತೆ: 06/ಫೆ. /2025

ಮಾರಕಾಸ್ತ್ರ ಹಿಡಿದು ರೀಲ್ಸ್| ಐವರ ಬಂಧನ!

ಕಲಬುರಗಿ: ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪಿಸ್ತೂಲ್, ಖಡ್ಗಗಳನ್ನು ಹಿಡಿದು ರಿಲ್ಸ್ ಮಾಡುತ್ತಿದ್ದ ಐದು ಜನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಗುಲಾಮ್ ನಬಿ ಅಲಿಯಾಸ್ ಬಿಲಾಲ್, ಮಹ್ಮದ್ ಪರ್ವೆಜ್, ಅಸ್ಲಮ್ ಪಟೇಲ್, ಖಧೀರ್ ಯುಸೂಫ್, ಶೆಕ್ ಸಾಹೇಬ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ತಮ್ಮ ರೀಲ್ಸ್ ಗಳಲ್ಲಿ ಪಿಸ್ತೂಲ್, ತಲವಾರ್ ಅನ್ನು ಝಳಪಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಮಾರಕಾಸ್ತ್ರಗಳನ್ನ ಹಿಡಿದು ರೀಲ್ಸ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಗ್ಯಾಂಗ್ ಇದಾಗಿತ್ತು. ಬಂಧಿತರಿಂದ ಪಿಸ್ತೂಲ್, ತಲವಾ‌ರ್, ಚಾಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.