ಡೈಲಿ ವಾರ್ತೆ: 06/ಫೆ. /2025
ಶಿವಮೊಗ್ಗ| ಖಾರದ ಪುಡಿ ಎರಚಿ ಬಸ್ ಚಾಲಕನಿಗೆ ಗೆಳೆಯನಿಂದ ಹಲ್ಲೆ – ವ್ಯಕ್ತಿ ಗಂಭೀರ
ಶಿವಮೊಗ್ಗ : ಖಾರದ ಪುಡಿ ಎರಚಿ ಸ್ನೇಹಿತನೇ ತನ್ನ ಗೆಳೆಯನ ಮೇಲೆ ಚಾಕುಯಿಂದ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದ ಶರಾವತಿ ನಗರದಲ್ಲಿ ನಡೆದಿದೆ.
ಸಿಟಿ ಬಸ್ ಚಾಲಕ ರವಿಕುಮಾರ್ ಮೇಲೆ ಅಡುಗೆ ಕಂಟ್ರಾಕ್ಟರ್ ಅರುಣ್ ಎಂಬಾತ ಚಾಕುಯಿಂದ ಹಲ್ಲೆ ಮಾಡಿದ್ದಾನೆ. ಹಳೆಯ ದ್ವೇಷದ ಹಿನ್ನಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
3-4 ಬಾರಿ ಸ್ನೇಹಿತನ ಹೊಟ್ಟೆಗೆ ಚಾಕುಯಿಂದ ಇರಿದಿದ್ದಾನೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರವಿಕುಮಾರ್‌ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.