ಡೈಲಿ ವಾರ್ತೆ: 07/ಫೆ. /2025

ಪ್ರಯಾಗ್‌ರಾಜ್‌| ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ!

ಮಹಾಕುಂಭ ನಗರ: ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಸೆಕ್ಟರ್ 18ರ ಶಂಕರಾಚಾರ್ಯ ಮಾರ್ಗದಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದೆ.

ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಹಾಕುಂಭ ಮೇಳದಲ್ಲಿ ಅಗ್ನಿ ಅವಘಡ ಸಂಭವಿಸುತ್ತಿರುವುದು ಇದು ಮೊದಲಲ್ಲ. ಜ.19ರಂದು ಸೆಕ್ಟರ್‌19ರ ಬಳಿ ಇದ್ದ ಕಲ್ಪವಾಸಿಗಳ ಶಿಬಿರದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು.

ಜ.20 ರಂದು ಸೆಕ್ಟರ್ 16ರ ಕಿನ್ನರ ಆಖಾಡಾದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಯಾವ ಅಗ್ನಿ ಅವಘಡಗಳಲ್ಲೂ ಅದೃಷ್ಟವಶಾತ್ ಜೀವ ಹಾನಿ ಸಂಭವಿಸಿಲ್ಲ.