

ಡೈಲಿ ವಾರ್ತೆ: 14/ಫೆ. /2025


“ಭವಾಬ್ಧಿ 2025″ರ ಕಾರ್ಯಕ್ರಮದ ಆಮತ್ರಣ ಪತ್ರಿಕೆ ಉದ್ಯಮಿ ಆನಂದ ಸಿ. ಕುಂದರ್ ಅವರಿಂದ ಬಿಡುಗಡೆ

ಕೋಟ| ಟೀಮ್ ಭವಾಬ್ಧಿ ಪಡುಕರೆ ಸಂಸ್ಥೆಯ ” ಭವಾಬ್ಧಿ 2025 “ರ ಕಾರ್ಯಕ್ರಮದ ಆಮತ್ರಣ ಪತ್ರಿಕೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ನಾಲ್ಕನೆಯ ವರ್ಷದ ಸಂಭ್ರಮದ ವೇದಿಕೆಯಲ್ಲಿ ರಾಜ್ಯ ಕಂಡ ಖ್ಯಾತ ಮುಳುಗುತಜ್ಞ ಆಪತ್ಭಾಂದವ “ಈಶ್ವರ್ ಮಲ್ಪೆ” ಅವರಿಗೆ ಭವಾಬ್ಧಿ “ಕಡಲೂರ ಸನ್ಮಾನ” ನೆರವೆರಲಿದ್ದು, ಸಾಂಸ್ಕ್ರತಿಕ ಕಾರ್ಯಕ್ರಮಗಳಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಮಂಗಳೂರು ಅಭಿನಯಿಸುವ “ಪರಮಾತ್ಮ ಪಂಜುರ್ಲಿ” ಕನ್ನಡ ನಾಟಕ , ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ವಿವಿಧ ನೃತ್ಯಾವಳಿ ಹಾಗು ಮಾರಣಕಟ್ಟೆ ಕಾರಣಿಕದ “ಬಿಡುವನೆ ಬ್ರಹ್ಮಲಿಂಗ” ಪ್ರಸಿದ್ಧ ನೃತ್ಯರೂಪಕ ,ಸ್ಥಳೀಯ ಪ್ರತಿಭಾನ್ವಿತ ನೃತ್ಯಪಟುಗಳಿಂದ ನೃತ್ಯ ಸಿಂಚನ, ಕರಾವಳಿಯ ಹೆಸರಾಂತ ಗಾಯಕರಿಂದ ಸಂಗೀತ ರಸಮಂಜರಿ, ಪ್ರತಿಭಾ ಪುರಸ್ಕಾರ , ವಿವಿಧ ಸಾಂಸ್ಕೃತಿಕ ಹಾಗು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷರಾದ ಸಂತೋಷ ಅವರು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಕಾರ್ಯದರ್ಶಿ ಸಂದೇಶ ಅಮೀನ್, ಸದಸ್ಯರಾದ ದರ್ಶನ್ ಪೂಜಾರಿ, ದರ್ಶನ್ ಬಂಗೇರ ಹಾಗು ಇತರರು ಉಪಸ್ಥಿತರಿದ್ದರು.