ಡೈಲಿ ವಾರ್ತೆ: 22/ಫೆ. /2025

ಜೆಇಇ ಮೈನ್ 2025ರ ಫಲಿತಾಂಶ| ಸುಣ್ಣಾರಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಜಿಲ್ಲೆಯ 3 ತಾಲೂಕಿಗೆ ಪ್ರಥಮ

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿ, ಕುಂದಾಪುರ 12 ವರ್ಷಗಳ ಹಿಂದೆ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆ ಇಂದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯು ಸಾಧನೆಯಲ್ಲಿಯೂ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ನಮ್ಮ ಸಂಸ್ಥೆ ಇಂದು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಹೀಗೆ ಎಲ್ಲಾ ರಂಗದಲ್ಲಿಯೂ ಕೂಡ ಎಕ್ಸಲೆಂಟ್ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಬಂದಿದೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಹೇಳಿದರು.
ಅವರು ಫೆ. 22 ರಂದು ಶನಿವಾರ ಎಕ್ಸಲೆಂಟ್ ಸಂಸ್ಥೆಯಲ್ಲಿ ನಡೆದ ಈ ಪ್ರತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜೆಇಇ ಮೈನ್ 2025ರ ಫಲಿತಾಂಶ ಉಡುಪಿ, ಕುಂದಾಪುರ, ಬೈಂದೂರು ತಾಲ್ಲೂಕಿಗೆ ಎಕ್ಸಲೆಂಟ್ ಕಾಲೇಜು ಪ್ರಥಮ ಸ್ಥಾನಿಯಾಗಿದೆ ಎಂದರು.

2024ರ ವರ್ಷದ ಫಲಿತಾಂಶಕ್ಕಿಂತ ಅತ್ಯುತ್ತಮ ಫಲಿತಾಂಶವನ್ನು ನಾವು ಪಡೆದಿರುತ್ತೇವೆ. 2024ರ ಫಲಿತಾಂಶ 97.66 ಜೆಇಇ ಮೈನ್ಸ್ನಲ್ಲಿ ಪಡೆದರೆ ಈ ವರ್ಷ ಅನನ್ಯ ಯು ಶೆಟ್ಟಿ 97.69 ಪರ್ಸ್ನೆಟೈಲ್ ತೆಗೆದು ಅತ್ಯುತ್ತಮ ಫಲಿತಾಂಶ ಪಡೆದಿರುತ್ತಾರೆ.

ಹಾಗೇ ವಿಷಯವಾರು ಫಲಿತಾಂಶದಲ್ಲಿ ಹಿಂದಿನ ವರ್ಷ 98.80 ಪರ್ಸ್ನೆಟೈಲ್ ತೆಗೆದರೆ ಈ ವರ್ಷ 2025ರ ಸಾಲಿನಲ್ಲಿ ಪ್ರಸ್ತುತಿ ಶೆಟ್ಟಿ 99.51 ಪರ್ಸ್ನೆಟೈಲ್ ತೆಗೆದಿರುತ್ತಾರೆ.

ಹಾಗೇ 90 ಪರ್ಸ್ನೆಟೈಲ್‌ಯಿಂದ 98 ಪರ್ಸ್ನೆಟೈಲ್ ವರೆಗೆ ಹಿಂದಿನ ವರ್ಷ ಕೇವಲ 14 ವಿದ್ಯಾರ್ಥಿಗಳು ಸ್ಥಾನ ಗಳಿಸಿದ್ದಾರೆ. ಈ ವರ್ಷ 90 ರ‍್ಸ್ನ್‌ಟೈಲ್‌ಯಿಂದ 99.51 ಪರ್ಸ್ನೆಟೈಲ್ ವರೆಗೆ 21 ವಿದ್ಯಾರ್ಥಿಗಳು ಸ್ಥಾನವನ್ನು ಪಡೆದಿದ್ದಾರೆ.

ತ್ರಿಶಾ ಪಿ ಶೆಟ್ಟಿ 98.58 , ಅಮರ್‌ದೀಪ್ ಶೆಟ್ಟಿ 98.68, ಶ್ರೀ ಹರ್ಷ ಪೆನ್ನುಗೊಂಡಲ 97.42 , ಸ್ಮರಣ್ ಎಂ 96.33, ಮನ್ವಿತ್ 96.32, ಪ್ರಜ್ವಲ್ ಕೆ 95.65, ಶಮನ ಯು ಶೆಟ್ಟಿ 95.59, ದೀಕ್ಷಿತ್ ಶೆಟ್ಟಿ 95.02, ಗಗನ್ 94.72 , ಚಿರಾಗ್ ಎಂ.ಕೆ 94.44 , ಸಿಂಚನ ಎಸ್ ಶೆಟ್ಟಿ 94.14, ಜಿತೇಶ್ ಶೆಟ್ಟಿ 95.55 , ಆಕಾಶ್ 92.62, ಚಿತ್ರಾ ನಾಯಕ್ 91.32, ಅನ್ವಿತಾ ಪ್ರಭಾಕರ್91.28 , ವೃತೀನ್ ಉದಯ್ ಕುಮಾರ್ 90.36, ತೇಜಸ್ವಿ ಕೃಷ್ಣಾನಂದ್ 90.21, ನಿಹಾಲ್ ಜೆ ಶೆಟ್ಟಿ 90.04, ಹಾಗೂ ಅವಿಜಿತ್ ಶೆಟ್ಟಿ 90.03 ಪರ್ಸ್ನೆಟೈಲ್ ಈ ವಿದ್ಯಾರ್ಥಿಗಳ ಸಾಧನೆಗೆ ಹಗಲು ರಾತ್ರಿಯೆನ್ನದೆ ಅವಿರತವಾಗಿ ಶ್ರಮಿಸಿದ, ಉಪನ್ಯಾಸಕ ಬಳಗದವರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ
ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ
ಎಕ್ಸಲೆಂಟ್ ಸಂಸ್ಥೆಯ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಎನ್ನುವಂತೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆಗಳು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾದ ಹಿನ್ನಲೆಯಲ್ಲಿ ಇವರು ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ತೋರಿಸಿದ ಕಾಳಜಿ ಹಾಗೂ ಶಿಕ್ಷಣದ ಮೇಲೆ ಇಟ್ಟಿರುವ ಗುರುತರವಾದ ಈ ಜವಾಬ್ದಾರಿಯನ್ನು ಗುರುತಿಸಿರುವ ಕನ್ನಡದ ಹೆಮ್ಮೆಯ ಸಮೂಹ ಮಾಧ್ಯಮವಾದ ಹಾಗೂ ಶ್ರೇಷ್ಠ ದಿನಪತ್ರಿಕೆಯಾದ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಮಾಡುವ “ಸುವರ್ಣ ಕನ್ನಡಿಗ 2025” ಪ್ರಶಸ್ತಿಗೆ ಭಾಜನರಾದ ಎಂ ಮಹೇಶ್ ಹೆಗ್ಡೆಯವರಿಗೆ ದೊರೆತಿರುವುದು ಅವರ ಸಾಧನೆಗೆ ದೊರೆತ ಪ್ರತಿಫಲವಾಗಿದೆ. ಇದು ಎಕ್ಸಲೆಂಟ್ ಸಂಸ್ಥೆಯ ಕೀರ್ತಿ ಕಳಶಕ್ಕೆ ದೊರೆತ ಮತ್ತೊಂದು ಹಿರಿಮೆಯ ಗರಿಯಾಗಿದೆ. ಈ ಪ್ರಶಸ್ತಿಗೆ ಭಾಜನರಾದ ಎಂ ಮಹೇಶ್ ಹೆಗ್ಡೆಯವರು ಈ ಪ್ರಶಸ್ತಿಯನ್ನು 12 ವರ್ಷಗಳಿಂದ ಶ್ರಮ ಹಾಗೂ ನಿಷ್ಠೆಯಿಂದ ಕಲಿತಿರುವ ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೂ ಹಾಗೂ ಈ ಸಂಸ್ಥೆಯು ನಮ್ಮ ಕುಟುಂಬವೆಂದು ಅರಿತು ನಮ್ಮ ತಪ್ಪು ಒಪ್ಪುಗಳನ್ನು ತಿದ್ದಿತೀಡಿದ ಪಾಲಕರಿಗೆ ಮನಪೂರ್ವಕವಾಗಿ ಅರ್ಪಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಮುಂದೆಯು ಸಹ ಹೊಸ ಹೊಸ ಸಮಾಜಮುಖಿ ಚಟುವಟಿಕೆಗಳನ್ನು ಇಟ್ಟುಕೊಂಡು ಸಂಸ್ಥೆಯ ಶ್ರೇಯೊಭಿವೃದ್ಧಿಯನ್ನು ರೂಪಿಸುತ್ತಾ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯನ್ನು ದೇಶದ ಉತ್ತುಂಗಕ್ಕೆ ಏರಿಸುವ ಪಣವನ್ನು ತೊಟ್ಟಿರುವುದು ಸಂಸ್ಥೆಯ ಆಶಯ ಹಾಗೂ ಛಲವಾಗಿದೆ ಎಂದು ಸಂಸ್ಥೆಯ ನಾಗರಾಜ್ ಶೆಟ್ಟಿಯವರು ತಿಳಿಸಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ. ಮಹೇಶ್‌ ಹೆಗ್ಡೆ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.