ಡೈಲಿ ವಾರ್ತೆ: 23/ಫೆ. /2025

ಕಿಂಗ್‌ ಕೊಹ್ಲಿ ಶತಕದೊಂದಿಗೆ ಭಾರತಕ್ಕೆ ವಿಜಯಮಾಲೆ| ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ಗೆ ಸೋಲು

ದುಬೈ: ಕಿಂಗ್‌ ಕೊಹ್ಲಿ ಆಕರ್ಷಕ ಶತಕ, ಶ್ರೇಯಸ್‌ ಫಿಫ್ಟಿ ಆಟದಿಂದ ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ಪಾಕಿಸ್ತಾನ ಸಾಧಾರಣ ಮೊತ್ತ ಕಲೆ ಹಾಕಿತ್ತು. 49.4 ಓವರ್‌ಗೆ ಪಾಕ್‌ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತ್ತು. 242 ರನ್‌ ಗುರಿ ಬೆನ್ನತ್ತಿದ ಭಾರತ 3 ವಿಕೆಟ್‌ ಕಳೆದುಕೊಂಡು 42.3 ಓವರ್‌ಗಳಲ್ಲಿ ಗುರಿ ತಲುಪಿತು.