


ಡೈಲಿ ವಾರ್ತೆ: 25/ಫೆ. /2025


ಕೇರಳ| ಪ್ರೇಯಸಿ ಹಾಗೂ ಕುಟುಂಬದ ಐವರನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ – ತಾಯಿ ಸ್ಥಿತಿ ಗಂಭೀರ!
ತಿರುವನಂತಪುರಂ: ಕೇರಳದಲ್ಲಿ ಯುವಕನೊಬ್ಬ ಪ್ರೇಯಸಿ ಹಾಗೂ ತನ್ನ ಕುಟುಂಬದ ಐವರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆರೋಪಿ ಅಫಾನ್ (23) ವರ್ಷದ ಯುವಕ ತನ್ನ 13 ವರ್ಷದ ಸಹೋದರ, 80 ವರ್ಷದ ಅಜ್ಜಿ ಮತ್ತು ಪ್ರೇಯಸಿ ಸೇರಿ 6 ಜನರನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ
ತಿರುವನಂತಪುರಂನ ವೆಂಜರಮೂಡುವಿನಲ್ಲಿ ನಡೆದಿದೆ.
ಆರೋಪಿ ಅಫಾನ್ ವಿಷ ಸೇವಿಸಿ ಬಂದು ಠಾಣೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಫಾನ್ ತನ್ನ ಮನೆಯವರನ್ನು ಕೊಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಹಲ್ಲೆಗೊಳಗಾದ ಐವರು ಸಾವನ್ನಪ್ಪಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಫಾನ್ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.