


ಡೈಲಿ ವಾರ್ತೆ: 02/ಮಾರ್ಚ್ /2025


ಗುರುಪುರ ಗ್ರಾ. ಪಂ. ವ್ಯಾಪ್ತಿಯ ಮಠದಗುಡ್ಡೆಯಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನ ಲೋಕಾರ್ಪಣೆ: SCST ಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕನಸು – ಗ್ರಾ. ಪಂ. ಅಧ್ಯಕ್ಷೆ ಸಫರಾ ನಾಸಿರ್

ಗುರುಪುರ| ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆಯಲ್ಲಿ ಸಿ.ಎಂ ಗ್ರಾಮ ವಿಕಾಸ ಯೋಜನೆ ಮತ್ತು ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ಮಾ. 1 ರಂದು ಶನಿವಾರ ಲೋಕಾರ್ಪಣೆಗೊಂಡಿತು.
ಶಾಸಕ ಡಾ.ಭರತ್ ಶೆಟ್ಟಿ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್, ಪಿಡಿಒ ಪಂಕಜಾ, ಉಪಾಧ್ಯಕ್ಷರಾದ ದಾವೂದ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ರವರು ಮಾತನಾಡುತ್ತಾ ಎಸ್.ಸಿ, ಎಸ್.ಟಿ ಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕನಸಾಗಿತ್ತು ಅವರ ಕನಸು ಇನ್ನೂ ನನಸಾಗಿಲ್ಲ, ಅವರು ರೂಪಿಸಿದ ಕಾಯ್ದೆಗಳು ಸರಿಯಾಗಿ ಪಾಲನೆಯಾಗದೆ ಮೀಸಲಾತಿ ಲಾಭ ಅಷ್ಟಕ್ಕಷ್ಟೇ ಇದೆ. ಶಿಕ್ಷಣ, ರಾಜಕೀಯ ಮಟ್ಟದಲ್ಲಿ ಅವರ ಕನಸು ಅನುಷ್ಠಾನಗೊಳ್ಳಬೇಕು. ಎಂದು ಹೇಳಿದರು.