ಡೈಲಿ ವಾರ್ತೆ: 13/ಮಾರ್ಚ್ /2025

ಮಾ.15 ರಂದು ಟೀಮ್ ಭವಾಬ್ಧಿ ಪಡುಕರೆ ವತಿಯಿಂದ ಸಮಾಜ ಸೇವಕ ಈಶ್ವರ್ ಮಲ್ಪೆಗೆ ಕಡಲೂರ ಸನ್ಮಾನ

ಕೋಟ: ಟೀಮ್ ಭವಾಬ್ಧಿ ಪಡುಕರೆ ಸಾದರ ಪಡಿಸುವ 4ನೇ ವರ್ಷದ ಸಂಭ್ರಮದ ‘ಭವಾಬ್ಧಿ-2025’ ಮಾ.15 ರಂದು ಶನಿವಾರ ಕೋಟತಟ್ಟು ಪಡುಕರೆಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಸಮಾಜ ಸೇವಕ ಈಶ್ವರ್ ಮಲ್ಪೆ ಇವರಿಗೆ ಕಡಲೂರು ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜ ಮುಖಿ ಕಾರ್ಯಕ್ರಮ ನಡೆಯಲಿದೆ.

ಸಂಜೆ 6.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಿಣ್ಣರ ಚಿಲಿಪಿಲಿ ಹಾಗೂ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಮಾರಣಕಟ್ಟೆ ಕಾರ್ಣಿಕ ಕ್ಷೇತ್ರದ ಪುಣ್ಯ ಕಥಾನಕ ”ಬಿಡುವನೇ ಬ್ರಹ್ಮಲಿಂಗ” ನೃತ್ಯರೂಪಕ ಹಾಗೂ ಸಂಗೀತ ರಸಮಂಜರಿ ನಡೆಯಲಿದೆ.

ರಾತ್ರಿ 9:30 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಮಂಗಳೂರು ಅಭಿನಯಿಸುವ “ಪರಮಾತ್ಮೆ ಪಂಜುರ್ಲಿ” ಎಂಬ ಕನ್ನಡ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಿಸಿರುತ್ತಾರೆ.