


ಡೈಲಿ ವಾರ್ತೆ: 16/ಮಾರ್ಚ್ /2025


ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನ್ ರಿಗೆ
ಜಿಲ್ಲಾ ವಕ್ಫ್ ಅಧ್ಯಕ್ಷ ಸಿ.ಎಚ್ ಅಬ್ದುಲ್ ಮುತ್ತಾಲಿ, ವಂಡ್ಸೆ ಅವರಿಂದ ಅಭಿನಂದನೆ

ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸೈಯದ್ ಅಲಿ ಹುಸೈನ್ ಅವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಗತಿ ಅತ್ಯಂತ ಸಂತೋಷದಾಯಕ ಎಂದು ಸಿ.ಎಚ್ ಅಬ್ದುಲ್ ಮುತ್ತಾಲಿಯವರು ತಿಳಿಸಿದ್ದಾರೆ.
ಗುಲ್ಬರ್ಗದ ಆಧ್ಯಾತ್ಮಿಕ ರಂಗದಲ್ಲಿ, ಮುಸ್ಲಿಂ ಸಮುದಾಯಕ್ಕೆ ಮುಂಚೂಣಿ ನಾಯಕರಾಗಿರುವ ಅಲಿ ಬಾಬಾ, ಬಂದೇ ನವಾಝ್ ದರ್ಗಾದ ಮೂಲಕ ಶೈಕ್ಷಣಿಕ ಚಳುವಳಿಗೆ ಶಕ್ತಿ ನೀಡಿದವರು. ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕೊಡುಗೆಗಳು ಮುಂದೆ ವಕ್ಫ್ ಮಂಡಳಿ ಮೂಲಕವೂ ಸಮುದಾಯಕ್ಕೆ ಕೊಡುಗೆ ನೀಡಲು ಅವರಿಂದ ಸಾಧ್ಯವಾಗಲಿ ಎಂದು ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿ.ಎಚ್.ಅಬ್ದುಲ್ ಮುತ್ತಾಲಿ ಅಭಿನಂದನೆಗಳನ್ನು ತಿಳಿಸಿ ಶುಭ ಹಾರೈಸಿದ್ದಾರೆ.