ಡೈಲಿ ವಾರ್ತೆ: 22/ಮಾರ್ಚ್ /2025

ಮಲ್ಪೆ| ಮಹಿಳೆಗೆ ಹಲ್ಲೆ ಪ್ರಕರಣದ ಅಮಾಯಕ ಬಂಧಿತರನ್ನು ಬಿಡುಗಡೆಗೊಳಿಸಲು ಅಗ್ರಹಿಸಿ ಮೀನುಗಾರರಿಂದ ಬೃಹತ್ ಪ್ರತಿಭಟನೆ: ಮಾನವೀಯತೆ ಇಲ್ಲದ ಎಸ್ಪಿ ಉಡುಪಿ ಜಿಲ್ಲೆಗೆ ಅಗತ್ಯ ಇಲ್ಲ : ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಿಡಿ

ಮಲ್ಪೆ : ಕಳ್ಳರನ್ನು ಕಟ್ಟಿ ಹಾಕಲೇಬೇಕು, ನಮ್ಮ ಮನೆಗೆ ಯಾರಾದರೂ ಕಳ್ಳರು ನುಗ್ಗಿದರೆ ಪೊಲೀಸರು ಬರುವ ತನಕ ಬಂದಿಸುವುದಿಲ್ಲವೇ ಹಾಗೇಯೇ ಮಲ್ಪೆಯ ಘಟನೆ ನಡೆದಿದೆ. ಉದ್ದೇಶಪೂರ್ವಕವಾಗಿ ನಡೆದ ಘಟನೆಯೇ ಅಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಕಳವುಗೈದ ಮಹಿಳೆಯನ್ನು ಕಟ್ಟಿಹಾಕಿ ಹಲ್ಲೆ ಪ್ರಕರಣದಲ್ಲಿ ಅಮಾಯಕ ಬಂಧಿತರನ್ನು ಬಿಡುಗಡೆಗೊಳಿಸಲು ಅಗ್ರಹಿಸಿ ಮಲ್ಪೆ ಮೀನುಗಾರರಿಂದ ಮಾ. 22 ರಂದು ಶನಿವಾರ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಗೆ ಮೀನುಗಾರರು ದೊಣ್ಣೆಯಿಂದ, ರಾಡಿನಿಂದ ಹೊಡೆದದ್ದಲ್ಲ, ಎರಡು ಕೆನ್ನೆಗೆ ಬಾರಿಸಿದ್ದು ಆ ಮಹಿಳೆಯದ್ದು ಏನಾದರು ಆಕ್ಷೇಪ ಇದೆಯಾ ಹಲ್ಲೆಗೊಳಗಾದ ಮಹಿಳೆಯರಿಗೆ ಯಾವುದೇ ಆಕ್ಷೇಪ ಇಲ್ಲದಿರುವಾಗ ಇದನ್ನು ದೊಡ್ಡ ಮಟ್ಟದ ಸುದ್ದಿ ಮಾಡಿದ್ದು ಯಾರು ?

ಡ್ರಗ್ಸ್ ಅನಾಚಾರ ಕಂಟ್ರೋಲ್ ಮಾಡದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಬಡವರನ್ನು ಬಂದಿಸುತ್ತಾರೆ. ಕರಾವಳಿಯ ಕೋಳಿ ಅಂಕ ಮಾಡಲು
ಬ್ರೀಟಿಷರು ಬಿಟ್ಟಿದ್ದಾರೆ ಆದರೆ ಉಡುಪಿ ಎಸ್ಪಿ ಬಿಡುತ್ತಿಲ್ಲ ಮನುಷ್ಯತ್ವ ಇಲ್ಲದ ಎಸ್ಪಿ, ಪ್ರಾಮಾಣಿಕವಾಗಿ ದುಡಿದು ತಿನ್ನುವ ಮಹಿಳೆಯರನ್ನು ಬಂಧಿಸಿದ್ದಾರೆ.
ಮಾನವೀಯತೆ ಇಲ್ಲದ ಎಸ್ಪಿ ಉಡುಪಿ ಜಿಲ್ಲೆಗೆ ಅಗತ್ಯ ಇಲ್ಲ ಎಂದರು.

ಜಾತಿ ಬೇದ ಮಾಡದೆ ‘ಬಂದರು’ ಎಲ್ಲರಿಗೂ ಅನ್ನ ಕೊಟ್ಟಿದೆ. ದಲಿತ ಎಂದು ಗೊತ್ತಿದ್ದು ಹೊಡೆದರೆ ಮಾತ್ರ ಅಟ್ರಾಸಿಟಿ ಇಲ್ಲದಿದ್ದರೆ ಇಲ್ಲ. ಪತ್ರಿಕೆ ಮತ್ತು ಮಾಧ್ಯಮದಲ್ಲಿ ಬರುವ ವರೆಗೂ ಯಾರಿಗೂ ತಿಳಿದಿಲ್ಲ ಬಳಿಕ ತಿಳಿಯಿತು ಅ ಮಹಿಳೆ ದಲಿತ ಸಮುದಾಯದವಳು ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಪ್ರತಿಭಟನೆಯಲ್ಲಿ ಮೀನುಗಾರ ಮುಖಂಡರು ಮೀನುಗಾರಿಕಾ ಮಂತ್ರಿ, ಹಾಗೂ ಸರಕಾರ ಮತ್ತು ಉಡುಪಿ ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದರು. ಮಹಿಳೆಗೆ ಥಳಿಸಿದ ನೆಪದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ. ತಕ್ಷಣ ಅವರ ಮೇಲಿನ ಸೆಕ್ಷನ್ ಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.

ಇಂದು ಮಲ್ಪೆಯಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ನಿಲ್ಲಿಸಿ, ಪ್ರತಿಭಟನೆ ನಡೆಸಿದರು. ಮೀನುಗಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದ್ದು, ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಸಾವಿರಾರು ಬೋಟ್ ಗಳು ಸ್ಥಬ್ಧವಾಗಿರುವುದು ಕಂಡು ಬಂದಿದೆ.