


ಡೈಲಿ ವಾರ್ತೆ: 23/ಮಾರ್ಚ್ /2025


ಹೊತ್ತಿ ಉರಿಯುವ ಮನೆಯಲ್ಲೂ ಎಣ್ಣೆ ಸುರಿಯುವ ಪ್ರಮೋದ್ ಮಧ್ವರಾಜ್ ಕ್ರುದ್ಧ ರಾಜಕಾರಣ – ಕೋಟ ನಾಗೇಂದ್ರ ಪುತ್ರನ್

ಕೋಟ : ಸರ್ಕಾರಕ್ಕೆ, ಮುಖ್ಯ ಮಂತ್ರಿಗಳಿಗೆ, ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ಕೇಸು ದಾಖಲಿಸಿರುವ ಠಾಣಾಧಿಕಾರಿಗಳನ್ನು ನಿಷ್ಠುರವಾಗಿ ಖಂಡಿಸಿ ವಿವಾದತ್ಮಕ ಹೇಳಿಕೆಗಳನ್ನು ನೀಡಿದರೆ ಇತ್ತ ಚಪ್ಪಾಳೆಗಳ ಸುರಿಮಳೆ, ಅತ್ತ ಕೇಸು ಇನ್ನಷ್ಟು ಬಿಗಿ ಗೊಳ್ಳುವ ಸಂಭವ ಇಂತಹ ಕ್ಷುಲ್ಲಕ ರಾಜಕಾರಣವನ್ನು ಚೆನ್ನಾಗಿ ಅರೆದು ಕುಡಿದಂತಿರುವ ಪ್ರಮೋದ್ ಮಧ್ವರಾಜ್ , ಆವತ್ತಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವನಾಗಿ ಸರ್ವ ಸವಲತ್ತನ್ನು ಅನುಭವಿಸಿ ಪಕ್ಷ ನಿಷ್ಠೆಯ ಕಿಂಚಿತ್ತೂ ಋಣ ಇಲ್ಲದಂತೆ, ತನ್ನ ಸ್ವಾರ್ಥಕ್ಕಾಗಿ ಬಿಜೆಪಿ ಸೇರಿ ಇದೀಗ ಅಲ್ಲಿ ಮೂಲೆ ಗುಂಪಾಗಿ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಪ್ರಮೋದ್ ಮಧ್ವರಾಜ್ ನೇರ ರಾಜಕಾರಣಿ ಯಾಗಿದ್ದರೆ ಕಾನೂನಿನಾತ್ಮಕ ಹೋರಾಟದ ಮೂಲಕ ಮಲ್ಪೆ ಪ್ರಕರಣ ದಲ್ಲಿ ಕೇಸು ದಾಖಲಿಸಿ ಕೊಂಡಿರುವ ಅಮಾಯಕ ಮೊಗವೀರ ಮಹಿಳೆಯರಿಗೆ ತ್ವರಿತ ವಾಗಿ ನ್ಯಾಯ ಒದಗಿಸಿ ಕೊಡಬಹುದಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ, ಮೊಗವೀರ ಮುಖಂಡ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಮಲ್ಪೆಯಲ್ಲಿ ಆಕಸ್ಮಿಕ ವೆಂಬಂತೆ ನಡೆದ ಮಹಿಳೆಯ ಹಲ್ಲೆ ಪ್ರಕರಣದಲ್ಲಿ ಬಂಧಿತರಾದ ಅಮಾಯಕ ಮಹಿಳೆಯರ ಪರವಾಗಿ ನ್ಯಾಯ ಒದಗಿಸಲು ಪಕ್ಷಾತೀತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆದರೆ ಸಿಕ್ಕಿದ ಅವಕಾಶವನ್ನು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಬಳಸಿಕೊಂಡ ಮಧ್ವರಾಜ್ ರಂತಹ ಮೂಲೆಗುಂಪಾಗಿದ್ದ ನಾಯಕರು ಅಮಾಯಕ ಮಹಿಳೆಯರಿಗೆ ನ್ಯಾಯ ಒದಗಿಸುವುದನ್ನು ಮರೆತು ಬೇಕಾಬಿಟ್ಟಿ ವಿವಾದತ್ಮಕ ಹೇಳಿಕೆ ಗಳಿಂದ ತಮ್ಮ ಅಸ್ತಿತ್ವವನ್ನು ತೊರ್ಪಡಿಸಲು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು. ಮೊನ್ನೆಯ ಪ್ರತಿಭಟನೆಯನ್ನು ಕೇವಲ ಬಿಜೆಪಿ ಪಕ್ಷ ಪ್ರಚಾರಕ್ಕಾಗಿ ಅದರಲ್ಲೂ ಕುಸಿಯುತ್ತಿರುವ ತಮ್ಮ ಇಮೇಜನ್ನು ವೃದ್ಧಿಸಿಕೊಳ್ಳಲು ಬಳಸುವಂತಿದ್ದರೆ ಪ್ರತಿಭಟನೆಗೆ ಪಕ್ಷಾತೀತ ಎಂಬ ಲೇಬಲನ್ನು ಹಚ್ಚಬಾರದಿತ್ತು ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ನಾಗೇಂದ್ರ ಪುತ್ರನ್ ರಾಜಕೀಯ ಬೇರೆ, ಸಮಾಜ, ಸಮುದಾಯದ ಸೌಹಾರ್ದತೆ ಬೇರೆ ಉರಿಯುವ ಮನೆಯಲ್ಲಿ ಎಣ್ಣೆ ಸುರಿಯುವ ಬದಲು ಅಮಾಯಕ ಮಹಿಳೆಯರ ಬಿಡುಗಡೆಗೆ, ಅವರಿಗೆ ನ್ಯಾಯ ಒದಗಿಸಿ ಕೊಡಲು ಒಗ್ಗಟ್ಟಾಗಿ ಹೋರಾಡೋಣ ಎಂದು ಮಧ್ವರಾಜ್ ಒಂದು ಸಣ್ಣ ಕರೆ ನೀಡಿದ್ದರೆ ಬಹುಷ್ಯ ಇಂತಹ ಅವಗಣಿತ ಸ್ಥಿತಿಯಲ್ಲೂ ನಮ್ಮೆಲ್ಲರ ದ್ರಷ್ಟಿಯಲ್ಲಿ ಅವರು ಪರಿಗಣಿತ ರಾಗುತ್ತಿದ್ದರು. ಆದರೆ ಪ್ರಚಂಡ ಚಪ್ಪಾಳೆಗಳನ್ನು ಗಿಟ್ಟಿಸಿ ಕೊಳ್ಳುತ್ತಿದ್ದ ತನ್ನ ವಿವಾದತ್ಮಕ ಡೈಲಾಗ್ ಗಳಿಂದ ಬಡ ಮಹಿಳೆಯರಿಗೆ ನ್ಯಾಯ ಒದಗಿಸಿ ಕೊಡುವುದಕ್ಕಿಂತಲೂ ಮುಖ್ಯವಾಗಿ ತನ್ನ ಇಮೇಜನ್ನು ವೃದ್ಧಿಸಿ ಕೊಳ್ಳಲು ಈ ವೇದಿಕೆಯನ್ನು ಬಳಸಿ ಕೊಳ್ಳುವ ಹಪಾಹಪಿಗೆ ಇಳಿಯಬಾರದಿತ್ತು ಎಂದು ಹೇಳಿರುವ ನಾಗೇಂದ್ರ ಪುತ್ರನ್, ಜೈಲಿನಲ್ಲಿರುವ ಅಮಾಯಕ ಮಹಿಳೆಯರಿಗೆ ಕೂಡಲೇ ನ್ಯಾಯ ದೊರೆತು ಹೊರಬಂದರೆ ಮತ್ತೆ ಚಪ್ಪಾಳೆ ಗಿಟ್ಟಿಸಿ ಕೊಳ್ಳಲು ಮಧ್ವರಾಜ್ ಅವರಿಗೆ ವೇದಿಕೆಗಳು ಹುಡುಕಬೇಕಾದಂತಹ ಪರಿಸ್ಥಿತಿ ಇರುವುದರಿಂದ ಇಲ್ಲೂ ಸಮುದಾಯದ ಮಹಿಳೆಯರ ಅಸಹಾಯಕತೆಯನ್ನು ಬಳಸಿ ಕೊಳ್ಳುವ ಮಧ್ವರಾಜ್ ಕುತ್ಸಿತ ರಾಜಕೀಯವನ್ನು ಸಮುದಾಯದ ವರೇ ತಿರಸ್ಕರಿಸುವ ಸಮಯ ದೂರವಿಲ್ಲ ಎಂದು ಪುತ್ರನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ