


ಡೈಲಿ ವಾರ್ತೆ: 24/ಮಾರ್ಚ್ /2025


ಸೈಕಲ್ ಬ್ಯಾಲೆನ್ಸ್ ಕಲಾವಿದ ದಿವಾಕರ್‌ಗೆ ಯು.ಟಿ.ಖಾದರ್ ಪರವಾಗಿ ಸನ್ಮಾನ

ಬಂಟ್ವಾಳ: ಚಂಡ್ತಿಮಾರ್ ಶ್ರೀ ವಿಘ್ನೇಶ್ವರ ಸೈಕಲ್ ಸರ್ಕಸ್ ಕಲಾ ಮಂಡಳಿಯ ಹೆಸರಿನಲ್ಲಿ ಸೈಕಲ್ ಬ್ಯಾಲೆನ್ಸ್ ಪ್ರದರ್ಶನ ನೀಡುತ್ತಿರುವ ಕಲಾವಿದ ಬಿ.ಸಿ.ದಿವಾಕರ್ ಅವರನ್ನು ಚಂಡ್ತಿಮಾರಿನ ಸೈಕಲ್ ಬ್ಯಾಲೆನ್ಸ್ ಪ್ರದರ್ಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಪರವಾಗಿ ಸನ್ಮಾನಿಸಲಾಯಿತು.
ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ದಿನೇಶ್ ಪೂಜಾರಿ, ಬೂಡಾ ಸದಸ್ಯ ಮನೋಹರ ನೇರಂಬೋಳು, ಪ್ರಮುಖರಾದ ಯಾದವ ಪೂಜಾರಿ ನಾವೂರು, ಗಣೇಶ್ ಪೂಜಾರಿ ನೇರಂಬೋಳು, ಗೋಪಾಲ ಪೂಜಾರಿ ನೇರಂಬೋಳು, ಗಣೇಶ್ ಆಚಾರ್ಯ ನೇರಂಬೋಳು ಮೊದಲಾದವರು ಉಪಸ್ಥಿತರಿದ್ದರು.