


ಡೈಲಿ ವಾರ್ತೆ: 28/ಮಾರ್ಚ್ /2025


ಕೋಟ| ಆಶ್ರಿತ ನರ್ಸಿಂಗ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಕೋಟ: ಲಯನ್ಸ್ ಕ್ಲಬ್ ಮಣಿಪಾಲ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಹಾಗೂ ಆಶ್ರಿತ ನರ್ಸಿಂಗ್ ಕಾಲೇಜು ಕೋಟ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಕೋಟ ಆಶ್ರಿತ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಚೇರ್ಮನ್ ಜಯಕರ್ ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು.
ಅವರು ಮಾತನಾಡಿ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ದೃಷ್ಟಿಯಿಂದ ನಾವು ಒಂದು ಸಮಾನ ಮನಸ್ಕರು ಸೇರಿ 2010ರಲ್ಲಿ ಕುಂದಾಪುರದಲ್ಲಿ ರೆಡ್ ಕ್ರಾಸ್ ಸೊಸೈಟಿ ತಾಲೂಕು ಘಟಕವನ್ನು ಪ್ರಾರಂಭಿಸಿದ್ದೇವೆ.
ನಂತರ ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ರಕ್ತ ನಿಧಿ ಕೇಂದ್ರ ಅವಶ್ಯಕತೆ ಇದೆ ಎನ್ನುವುದು ತಿಳಿಯಿತು.
ರಕ್ತ ನಿಧಿ ಕೇಂದ್ರಗಳು ಉಡುಪಿಯಲ್ಲಿ ಮಾತ್ರ ಇರುವುದರಿಂದ ಈ ಭಾಗದಲ್ಲಿ ರಕ್ತನಿಧಿ ಕೇಂದ್ರ ಅವಶ್ಯಕತೆ ಇತ್ತು. ಏಕೆಂದರೆ ಅಪಘಾತಗಳು, ಸರ್ಜರಿಗಳು, ಡೆಲಿವರಿ ಇಂತಹ ಗಂಡಾಂತರ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವಾಗ ದೂರದ ಊರಿಗೆ ಹೋಗಿ ತರುವಂತ ಪರಿಸ್ಥಿತಿ ಇತ್ತು. ಅದಕ್ಕಾಗಿ 2015ರಲ್ಲಿ ಕುಂದಾಪುರದಲ್ಲಿ ರಕ್ತ ನಿಧಿ ಕೇಂದ್ರ ಮಾಡಿದ್ದೇವೆ.

ಪ್ರತಿ ವರ್ಷ ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ 90ರಷ್ಟು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಕಾಲೇಜುಗಳಲ್ಲಿ ಆಯೋಜಿಸುತ್ತಿದ್ದೇವೆ. ಇದೇ ರೀತಿಯಾಗಿ ಎಂಟರಿಂದ ಒಂಬತ್ತು ಸಾವಿರದಷ್ಟು ರಕ್ತದ ಯುನಿಟನ್ನು ಸಂಗ್ರಹಿಸಿ ಬೇಕಾದಂತ ಎಲ್ಲ ರೋಗಿಗಳಿಗೆ ಸರಬರಾಜು ಮಾಡುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಕಡೆ ಆಸ್ಪತ್ರೆಯಿಂದ ಬೇಡಿಕೆಗಳು ಬರುತ್ತದೆ ಆ ಬೇಡಿಕೆಗಳನ್ನು ಪೂರೈಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಜಯಕರ್ ಶೆಟ್ಟಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶ್ರಿತ ಕಾಲೇಜಿನ ನಿರ್ದೇಶಕರಾದ ಡಾ. ವಿದ್ಯಾಧರ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಮಣಿಪಾಲ ಇದರ ಅಧ್ಯಕ್ಷೆಯಾದ ಡಾ. ಶಕೀಲಾ ಸಚಿನ್, ಲಯನ್ಸ್ ಕ್ಲಬ್ ಮಣಿಪಾಲ ಇದರ ಮಾಜಿ ಅಧ್ಯಕ್ಷೆಯಾದ ಡಾ. ಅರ್ಚನಾ ಭಕ್ತ, ಶ್ರೀಮತಿ ಸರಿತಾ ಸಂತೋಷ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿ, ರೆಡ್ ಕ್ರಾಸ್ ಸಂಸ್ಥೆಯ ಕೋಶಾಧಿಕಾರಿ ಶಿವರಾಮ ಶೆಟ್ಟಿ, ಆಶ್ರಿತಾ ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಶ್ರಿತ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಶರಾವತಿ ಸ್ವಾಗತಿಸಿದರು.
ಉಪನ್ಯಾಸಕಿ ಮೋನಿಷಾ ನಿರೂಪಿಸಿದರು.
ಶ್ರೀಮತಿ ಮಧುಶ್ರೀ ವಂದಿಸಿದರು. ಹಾಗೂ ಆಶ್ರಿತ ನರ್ಸಿಂಗ್ ಕಾಲೇಜಿನ ಎಲ್ಲಾ ಆಧ್ಯಾಪಕ ವೃಂದದವರು ಸಹಕರಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಂದ ಒಟ್ಟು 62 ಯುನಿಟ್ ರಕ್ತ ಸಂಗ್ರಹಿಸಲಾಯಿತು.