


ಡೈಲಿ ವಾರ್ತೆ: 28/ಮಾರ್ಚ್ /2025


ಏ.1 ಮತ್ತು 2 ರಂದು ಅಲುಗುಡ್ಡೆ – ಮಾಲಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ನಂದಿಕೇಶ್ವರ ದೇವಸ್ಥಾನದ ಹಾಲು ಹಬ್ಬ, ಗೆಂಡೆಸೇವೆ ಮತ್ತು ತುಲಾಭಾರ

ಕೋಟ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲುಗುಡ್ಡೆ – ಮಾಲಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ನಂದಿಕೇಶ್ವರ ದೇವಸ್ಥಾನದ
ಹಾಲು ಹಬ್ಬ, ಗೆಂಡೆಸೇವೆ ಮತ್ತು ತುಲಾಭಾರವು ಏ. 1 ಮತ್ತು 2 ರಂದು ನಡೆಯಲಿದೆ.
ಏಪ್ರಿಲ್ 1 ರಂದು ಮಂಗಳವಾರ: ರಾತ್ರಿ 7:30 ರಿಂದ 10:00ರ ವರೆಗೆ ಶ್ರೀ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಅರ್ಪಿಸುವ ಕುಂದಕನ್ನಡ ನಗೆ ನಾಟಕ “ಒಂದಲ್ಲಾ ಒಂದು ಸಮಸ್ಯೆ” ನಡೆಯಲಿದೆ.
ನಂತರ ನಾಗದರ್ಶನ, ರಾತ್ರಿ ಗಂಟೆ 10:30ಕ್ಕೆ ಗೆಂಡೆಸೇವೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಏಪ್ರಿಲ್ 2 ರಂದು ಬುಧವಾರ: ಬೆಳಿಗ್ಗೆ ಗಂಟೆ 6:00 ರಿಂದ ಡಕ್ಕೆ ಬಲಿ.
ಬೆಳಿಗ್ಗೆ ಗಂಟೆ 7 ರಿಂದ 10:30ರ ವರೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹಣ್ಣುಕಾಯಿ ಸಮರ್ಪಣೆ.
ಬೆಳಿಗ್ಗೆ 10:30 ರಿಂದ ತುಲಾಭಾರ ಸೇವೆ.
ಮಧ್ಯಾಹ್ನ ಗಂಟೆ 12:30ಕ್ಕೆ ಅನ್ನಸಂತರ್ಪಣೆ.
ರಾತ್ರಿ 9:30 ರಿಂದ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ ಶ್ರೀ ಕ್ಷೇತ್ರ ಕಮಲಶಿಲೆ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯವರು ಪ್ರಕಟಿಸಿದ್ದಾರೆ.