ಡೈಲಿ ವಾರ್ತೆ: 28/ಮಾರ್ಚ್ /2025

ಬಸ್ರೂರು| ಕಾರು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ: ಸವಾರರಿಬ್ಬರು ಸ್ಥಳದಲ್ಲೇ ಸಾವು

ವರದಿ: ಮಂಜುನಾಥ್ ಬಳ್ಕೂರು

ಕುಂದಾಪುರ| ಸ್ಕೂಟರ್ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾ. 28 ರಂದು ಶುಕ್ರವಾರ ಮಧ್ಯಾಹ್ನ ಬಸ್ರೂರು ಸಮೀಪದ ಬಳ್ಕೂರು ಬಿ.ಹೆಚ್. ಶಾಲೆ ಬಳಿ ಸಂಭವಿಸಿದೆ.

ಮೃತಪಟ್ಟ ಸ್ಕೂಟರ್ ಸವಾರರನ್ನು ಬಳ್ಕೂರಿನ ರಾಜೀವ ಶೆಟ್ಟಿ(50) ಹಾಗೂ ಸುಧೀರ್ ದೇವಾಡಿಗ(35) ಎಂದು ಗುರುತಿಸಲಾಗಿದೆ.

ಅಭಿಷೇಕ್ ಶೆಟ್ಟಿ ಎನ್ನುವ ವ್ಯಕ್ತಿ ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದ ಮಾರುತಿ ಸಿಫ್ಟ್ ಕಾರೊಂದು
ಬಸ್ರೂರುಯಿಂದ ಕಂಡ್ಲೂರು ಕಡೆಗೆ ಹೋಗುತ್ತಿದ ಸ್ಕೂಟರ್ ಗೆ ನೇರ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಸ್ಕೂಟರ್ ಸವಾರರು ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.