


ಡೈಲಿ ವಾರ್ತೆ: 28/ಮಾರ್ಚ್ /2025


ನಗರ (ಕರಿಮನೆ): ಪತ್ರಕರ್ತ, ನಿರೂಪಕ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಅವರಿಗೆ ಅಭಿನಂದನೆ

ಹೊಸನಗರ: ಶ್ರೀ ಗಂಗಾಧರೇಶ್ವರ ದೇವಸ್ಥಾನ ಕರಿಮನೆ, ಹೊಸಬೀಡು ಇಲ್ಲಿ ಸಾರ್ವಜನಿಕ ಕ್ರೀಡಾಕೂಟದ ಸಂದರ್ಭದಲ್ಲಿ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಮತ್ತು ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಸಂಭ್ರಮದಿಂದ ಸನ್ನಿಧಾನದಲ್ಲಿ ಜರುಗಿತು. ಶ್ರೀಗಂಗಾಧರೇಶ್ವರ ಸನ್ನಿಧಾನದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ಕ್ರೀಡಾಕೂಟ ಇತ್ತೀಚಿಗೆ ಕ್ಷೇತ್ರದಲ್ಲಿ ಜರುಗಿತು.
ಶ್ರೀ ಗಂಗಾಧರೇಶ್ವರ ಮಿತ್ರ ಮಂಡಳಿ (ರಿ.) ಕರಿಮನೆ ಹೊಸಬೀಡು, ನಗರ ಹೋಬಳಿ, ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ನಿರೂಪಣೆಗೆ, ಕಾರ್ಯಕ್ರಮದ ಯಶಸ್ವಿನ ಸಂದರ್ಭವಾಗಿ ಪತ್ರಕರ್ತರು ಹಾಗೂ ವರದಿಗಾರರಾದ ಕೆ.ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರನ್ನ ಗಂಗಾಧರೇಶ್ವರ ಮಿತ್ರ ಮಂಡಳಿ ಮತ್ತುಧಾರ್ಮಿಕ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿ ಸೇರಿದಂತೆ ಸಾರ್ವಜನಿಕರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗಂಗಾಧರೇಶ್ವರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ಊರಿನವರು ಗ್ರಾಮಸ್ಥರು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.