

ಡೈಲಿ ವಾರ್ತೆ: 07/ಏಪ್ರಿಲ್/2025


ಬೇಸಿಗೆ ಸಮಯದಲ್ಲಿ ಪುದೀನಾ ಎಲೆಗಳನ್ನು ಸೇವಿಸುವುದರಿಂದ
ಆರೋಗ್ಯಕ್ಕಾಗುವ ಪ್ರಯೋಜನಗಳು

ಮನೆಗಳಲ್ಲಿ ಕೆಲ ಅಡುಗೆ ಪದಾರ್ಥಗಳನ್ನು ಮಾಡಲು
ಹಾಗೂ ಆಯುರ್ವೇದದಲ್ಲಿ ಔಷಧಿ ತಯಾರಿಕೆಗಾಗಿ ಪುದೀನಾ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಇದು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿದ್ದು, ಅನೇಕ ರೋಗಗಳಿಂದ ನಮ್ಮನ್ನು ಪಾರು ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಪುದೀನಾ ಎಲೆಗಳನ್ನು ಬೇಸಿಗೆಯ ಸಂದರ್ಭದಲ್ಲಿ ಸೇವಿಸುವುದರಿಂದ ನಮ್ಮ ದೇಹವು ತಂಪಾಗಿರುತ್ತದೆ. ಬೇಸಿಗೆಯ ಸಮಯದಲ್ಲಿ ಪುದೀನಾ ಸೇವಿಸುವುದರಿಂದಾಗುವ ಲಾಭಗಳನ್ನು ತಿಳಿಯೋಣ.
ಬೇಸಿಗೆ ಕಾಲದಲ್ಲಿ ಬಿಸಿಲು ಹೆಚ್ಚಾಗಿರುತ್ತದೆ. ಜನರು ಸುಡುವ ಬಿಸಿಲಿನಲ್ಲಿ ದೇಹವನ್ನು ತಣ್ಣಗಾಗಿಸಲು AC ಗಳು ಮತ್ತು ಕೂಲರ್‌ಗಳ ಮೊರೆ ಹೋಗುವುದು ಹೆಚ್ಚು. ಆದರೆ ನಿಮ್ಮ ದೇಹವನ್ನು ಒಳಗಿನಿಂದ ತಂಪಾಗಿಸಲು ಬಯಸಿದರೆ, ತಂಪು ಪಾನೀಯವನ್ನು ಕುಡಿಯಬಹುದು ಅಥವಾ ಐಸ್ ಕ್ರೀಮ್ ತಿನ್ನಬಹುದು. ಈ ಯಾವ ಆಯ್ಕೆಗಳು ನಿಮ್ಮ ಬಳಿ ಇಲ್ಲದಿದ್ದಾಗ ನೀವು ಪುದೀನಾ ಎಲೆಗಳನ್ನು ಸೇವಿಸುವುದರಿಂದ ನಿಮ್ಮ ದೇಹ ಆರೋಗ್ಯವಾಗಿ ತಂಪಾಗಿರುತ್ತದೆ.

ಪುದೀನಾ ಎಲೆಗಳ ಪ್ರಯೋಜನಗಳು:
ದೇಹವನ್ನು ತಂಪಾಗಿಸುತ್ತದೆ: ಬೇಸಿಗೆಯಲ್ಲಿ ದೇಹವನ್ನು
ತಂಪಾಗಿಡಲು ಪುದೀನಾ ಪ್ರಯೋಜನಕಾರಿಯಾಗಿದೆ. ಎಲೆಗಳು ಇದು ತುಂಬಾ ದೇಹವನ್ನು ತಂಪಾಗಿರಿಸುವುದಲ್ಲದೆ, ನಿರ್ಜಲೀಕರಣವನ್ನು ತಡೆಯುತ್ತದೆ.
ರೋಗನಿರೋಧಕ ಶಕ್ತಿಗೆ ಸಹಾಯ: ಈ ಹಸಿರು ಎಲೆಗಳಲ್ಲಿರುವ
ವಿಟಮಿನ್ ಸಿ, ವಿಟಮಿನ್ ಎ ಮತ್ತು ಇತರ ಪೋಷಕಾಂಶಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಕೆಮ್ಮು ಪರಿಹಾರ: ಪುದೀನಾ ಎಲೆಗಳು ಕಫವನ್ನು ನಿವಾರಿಸುವಲ್ಲಿ ಸಹ ಪರಿಣಾಮಕಾರಿಯಾಗಿವೆ. ಈ ಎಲೆಗಳನ್ನು ಅಗಿಯುವುದರಿಂದ ಎದೆ ಬಿಗಿತದ ಸಮಸ್ಯೆ ಕಡಿಮೆಯಾಗುತ್ತದೆ. ಈ ಎಲೆಗಳು ಆಸ್ತಮಾದಿಂದ ಬಳಲುತ್ತಿರುವ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ.
ಜೀರ್ಣಾಂಗ ವ್ಯವಸ್ಥೆ ಅಭಿವೃದ್ಧಿ: ಪುದೀನಾ ಎಲೆಗಳಲ್ಲಿರುವ
ಫೈಬರ್ ಮತ್ತು ರೋಗ ನಿರೋಧಕ ಅಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ: ಪುದೀನವು
ವಿಟಮಿನ್ ಸಿ ಅನ್ನು ಹೊಂದಿರುವುದರಿಂದ, ಕೂದಲು ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳಿಂದಾಗಿ, ಚರ್ಮದ ಸೋಂಕುಗಳು ಕಡಿಮೆಯಾಗುತ್ತವೆ.
ಪುದೀನಾ ಎಲೆಗಳನ್ನು ಸೇವಿಸುವ ವಿಧಾನ: ಪುದೀನ ರಾಯತ : ಮೊಸರಿನಲ್ಲಿ ಪುದೀನಾ, ಹುರಿದ ಜೀರಿಗೆ, ಕಪ್ಪು ಉಪ್ಪು ಮತ್ತು ಸೌತೆಕಾಯಿಯನ್ನು ಬೆರೆಸಿ ತಣ್ಣನೆಯ ರಾಯತ ತಯಾರಿಸಿ ಕುಡಿಯುವುದು.
ಪುದೀನ ಶರಬತ್ತು : ಪುದೀನಾ ಎಲೆಗಳು, ನಿಂಬೆಹಣ್ಣು, ಸಕ್ಕರೆ, ಕಪ್ಪು ಉಪ್ಪು ಮತ್ತು ತಣ್ಣೀರು ಮಿಶ್ರಣ ಮಾಡಿ. ಅದನ್ನು ಸೋಸಿ, ಐಸ್ ಸೇರಿಸಿ ಕುಡಿಯಲು ಬಳಸಬಹುದು.
ಪುದೀನ ಚಹಾ: ಸ್ವಲ್ಪ ಬೆಚ್ಚಗಿನ ಪುದೀನಾ ಚಹಾ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ನಿಂಬೆ ಮತ್ತು ಜೇನುತುಪ್ಪ ಸೇರಿಸಿ ಕುಡಿಯಿರಿ.
ಪುದಿನ ಚಟ್ನಿ : ಟೊಮೆಟೊ, ಕೊತ್ತಂಬರಿ, ಹಸಿರು
ಮೆಣಸಿನಕಾಯಿ, ನಿಂಬೆ ಮತ್ತು ಪುದೀನ ಮಿಶ್ರಣ ಮಾಡಿ ರುಚಿಕರವಾದ ಪುದಿನ ಚಟ್ನಿ ತಯಾರಿಸಿ ರೊಟ್ಟಿಯ ಜತೆ ತಿನ್ನಿರಿ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.