


ಡೈಲಿ ವಾರ್ತೆ: 10/ಏಪ್ರಿಲ್/2025


ಉಡುಪಿ| ₹4ಲಕ್ಷ ಮೌಲ್ಯದ 27 ಮೊಬೈಲ್ ಫೋನ್ ಪತ್ತೆ- ವಾರಸುದಾರರಿಗೆ ಹಸ್ತಾಂತರ

ಉಡುಪಿ: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿರುವ ಪೊಲೀಸರು ವಾರಸುದಾರರಿಗೆ ಬುಧವಾರ ಹಸ್ತಾಂತರಿಸಿದರು.
ಒಟ್ಟು 4,22,689 ರೂ. ಮೌಲ್ಯದ ವಿವಿಧ ಕಂಪೆನಿಯ 27 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಗರ ಠಾಣೆಯಲ್ಲಿ ಕೆಎಸ್‌ಪಿ ಆ್ಯಪ್ ಮೂಲಕ ಮೊಬೈಲ್ ಕಳವಾದ ಬಗ್ಗೆ ದೂರುಗಳು ಸ್ವೀಕರಿಸಿದ್ದು, ಅನಂತರ ಆ ಮೊಬೈಲ್‌ಗಳನ್ನು ಸಿಎಸ್‌ಆರ್ ಪೋರ್ಟಲ್ ಆಪ್ಲಿಕೇಶನ್ ಅಡಿಯನ್ನು ಬ್ಲಾಕ್ ಮಾಡಿ 2025ನೇ ಸಾಲಿನಲ್ಲಿ 32 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಸುಮಾರು 5 ಮೊಬೈಲ್‌ಗಳನ್ನು ಈ ಹಿಂದೆ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಡಿವೈಎಸ್‌ಪಿ ಪ್ರಭು ಡಿ.ಟಿ. ತಿಳಿಸಿದರು.
ಈ ಕಾರ್ಯಾಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ದಲಿಂಗಪ್ಪ ಮತ್ತು ಪರಮೇಶ್ವರ ಹೆಗಡೆ ಮತ್ತು ಉಡುಪಿ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ನೇತೃತ್ವದಲ್ಲಿ ನಗರ ಠಾಣೆಯ ನಿರೀಕ್ಷಕರಾದ ಮಂಜುನಾಥ ವಿ. ಬಡಿಗೇರ್ ಹಾಗೂ ಪೊಲೀಸ್ ಉಪನಿರೀಕ್ಷಕರಾದ ಪುನೀತ್ ಕುಮಾರ್ ಬಿ.ಈ., ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ ಮಾರ್ಗದರ್ಶನದಲ್ಲಿ ನಡೆದಿದೆ.