ಡೈಲಿ ವಾರ್ತೆ: 10/ಏಪ್ರಿಲ್/2025

ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ: ಆರೋಪಿಗಳ ಬಂಧನ

ಪುತ್ತೂರು: ಕಾನೂನಿಗೆ ಧಕ್ಕೆ ತರುವಂತೆ ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿ, ಅದರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಪುತ್ತೂರು ತಾಲೂಕು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32) ಎಂಬವರುಗಳ ವಿರುದ್ದ ಬುಧವಾರ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬುಧವಾರವೇ ದಸ್ತಗಿರಿ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.