


ಡೈಲಿ ವಾರ್ತೆ: 14/ಏಪ್ರಿಲ್/2025


ಜೈ ಭೀಮ್ ರ‍್ಯಾಲಿ
ಪರ್ಕಳದಲ್ಲಿ ಪೂರ್ಣ ಕುಂಭ ಸ್ವಾಗತ
ಕೃಪೆ: ಗಣೇಶ್ ರಾಜ್ ಸರಲೇಬೇಟ್ಟು, ವರದಿ: ಅಬ್ದುಲ್ ರಶೀದ್ ಮಣಿಪಾಲ

ಪರ್ಕಳ: ಪರ್ಕಳ ನಗರದ ಪೇಟೆಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲಾಧಿಕಾರಿಗಳು ಉದ್ಘಾಟಿಸಿದ ಜೈ ಭೀಮ್ ರ‍್ಯಾಲಿಯನ್ನು ಪರ್ಕಳದಲ್ಲಿ ಸ್ವಾಗತ ಹೋಟೆಲ್ ಮಾಲಕರಾದ ಮೋಹನ್ ದಾಸ್ ನಾಯಕ್ ಅವರು ಚಂಡೆ ವಾದ್ಯ ಪಟಾಕಿಯ ಅಬ್ಬರದೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಹಾರ ಹಾಕಿ ಸ್ವಾಗತಿಸಿಕೊಂಡು ವಾಹನ ಜಾತವನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಜಗದೀಶ್ ಭೋವಿ, ಪಿಡಬ್ಲ್ಯೂಡಿ ಗುತ್ತಿಗೆದಾರರುಗಳಾದ ನಾರಾಯಣ ಪರ್ಕಳ. ಶಿವಕುಮಾರ್ ಪರ್ಕಳ,
ಅಶೋಕ್ ಕುಮಾರ್, ಪರ್ಕಳ, ಪರಮೇಶ್ವರ್ ಉಪ್ಪುರು, ಕಮಲಾಕ್ಷ ಚೆರ್ಕಾಡಿ, ಜಿಲ್ಲಾ ಸಂಘಟನಾ ಸಂಚಾಲಕರದ ವಾಸುದೇವ ಮುದೂರು, ಸಾಮಾಜಿಕ ಕಾರ್ಯಕರ್ತ. ಗಣೇಶ್ ರಾಜ್ ಸರಳೆಬೆಟ್ಟು, ಆಪದ್ಬಾಂಧವ ಅಬ್ದುಲ್ ರಶೀದ್ ಸರಳಬೆಟ್ಟು ಮೊದಲಾದವರು ರ್‍ಯಾಲಿಯನ್ನು ಪರ್ಕಳದಲ್ಲಿ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಂತರ ಯುಗಾದಿ ಹಬ್ಬದಸಿಹಿ ಹಂಚಲಾಯಿತು.