


ಡೈಲಿ ವಾರ್ತೆ: 15/ಏಪ್ರಿಲ್/2025


ಪಾರಂಪಳ್ಳಿ ಪಡುಕರೆ ಶ್ರೀಗುರು ಶನೀಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ , ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಉದ್ಯಮಿ ಆನಂದ್ ಸಿ ಕುಂದರ್ ಅವರಿಂದ ಬಿಡುಗಡೆ

ಕೋಟ: ಶ್ರೀ ಗುರು ಶನೀಶ್ವರ ದೇವಸ್ಥಾನ ಪಾರಂಪಳ್ಳಿ ಪಡುಕರೆ ಸಾಲಿಗ್ರಾಮ ಇದರ ನೂತನ ಶಿಲಾಮಯ ದೇವಸ್ಥಾನದ ದಿನಾಂಕ ಮೇ 8 , 9 ಮತ್ತು 10 ರಂದು ನಡೆಯುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ , ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀಯುತ ಆನಂದ್ ಸಿ. ಕುಂದರ್ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಅಮೃತೇಶ್ವರಿ ದೇವಸ್ಥಾನ ಕೋಟ ಇವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಸತೀಶ್ ಮೆಂಡನ್, ಸಮಿತಿಯ ಗೌರವ ಸಲಹೆಗಾರರಾದ ಜಬ್ಬ ಮೆಂಡನ್,ರಾಮ ಎಂ ಬಂಗೇರ,ಸಿದ್ಧಿ ಶ್ರೀನಿವಾಸ ಪೂಜಾರಿ,ರತ್ನಾಕರ ಪೂಜಾರಿ,ವಿಜಯ ಪೂಜಾರಿ,ನರಸಿಂಹ ಪೂಜಾರಿ,ಲೋಕೇಶ್ ಕಾಂಚನ್,ಸಂತೋಷ್ ಕರ್ಕೇರ , ದಿನೇಶ್ ಮರಕಾಲ, ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಹಾಗು ಪ್ರಮುಖರು ಉಪಸ್ಥಿತರಿದ್ದರು.