


ಡೈಲಿ ವಾರ್ತೆ: 16/ಏಪ್ರಿಲ್/2025


ಸುರತ್ಕಲ್| ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ಮಂಗಳೂರು: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನ ಎನ್‌ಐಟಿಕೆ ಬೀಚ್‌ನಲ್ಲಿ ನಡೆದಿದೆ.
ಧ್ಯಾನ್ ಬಂಜನ್(18), ಹನೀಶ್ ಕುಲಾಲ್(15) ಸಮುದ್ರಪಾಲಾದ ಬಾಲಕರು.
ಬುಧವಾರ ಸೂರಿಂಜೆಯ ಕುಟುಂಬವೊಂದರ ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದುದರಿಂದ ಕುಟುಂಬದ ಸದಸ್ಯರು ಮುಂಬೈಯಿಂದ ಬಂದಿದ್ದರು. ಮದುಮಗಳ ಸಹೋದರನ ಜೊತೆಗೆ ಹತ್ತು ಮಂದಿ ಸಂಜೆ ಬೀಚ್‌ಗೆ ತೆರಳಿದ್ದರು. ಈ ವೇಳೆ ಬಾಲಕರಿಬ್ಬರು ಸಮುದ್ರ ಪಾಲಾಗಿದ್ದಾರೆ.
ತಕ್ಷಣ ಲೈಫ್ ಗಾರ್ಡ್‌ಗಳು ಧ್ಯಾನ್‌ನನ್ನ ರಕ್ಷಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಹನೀಶ್ ಸಮುದ್ರ ಪಾಲಾಗಿದ್ದು, ಈಜುಗಾರರ ತಂಡದಿಂದ ಹುಡುಕಾಟ ನಡೆಯುತ್ತಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.