ಡೈಲಿ ವಾರ್ತೆ: 15/ಏಪ್ರಿಲ್/2025

ಆಯನೂರು|ಸಿಡಿಲಿಗೆ 40 ಕುರಿಗಳು ಬಲಿ

ಶಿವಮೊಗ್ಗ: ಕುಂಸಿ, ಆಯನೂರು ಸುತ್ತಮುತ್ತ ಇಂದು ಸಂಜೆ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದ ವಿವಿಧೆಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.

ಸಿಡಿಲು ಬಡಿದು ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.ಆಯನೂರು ಸುತ್ತಮುತ್ತ ಇಂದು ಸಂಜೆ ಸುಮಾರು ಮುಕ್ಕಾಲು ಗಂಟೆಗು ಹೆಚ್ಚು ಹೊತ್ತು ಭಾರಿ ಮಳೆಯಾಗಿದೆ. ಗುಡುಗು, ಗಾಳಿ ಸಾಹಿತ ಜೋರು ಮಳೆ ಸುರಿದಿದೆ.

ಸಿಡಿಲಿಗೆ ಕುರಿಗಳು ಸಾವು ;
ಆಯನೂರು ಸಮೀಪದ ಬಾಳೆಕೊಪ್ಪ ಗ್ರಾಮದಲ್ಲಿ ಸಿಡಿಲಿಗೆ ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಇಲ್ಲಿನ ಹುಚ್ಚಪ್ಪ ಎಂಬುವವರಿಗೆ ಸೇರಿದ ಕುರಿಗಳನ್ನು ಗುಡ್ಡದ ಬಯಲಿನಲ್ಲಿ ಮೇಯಿಸುತ್ತಿದ್ದರು. ಈ ಸಂದರ್ಭ ಗುಡುಗು ಸಹಿತ ಮಳೆ ಶುರುವಾಗಿದೆ.ಈ ವೇಳೆ ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ.

ಇದರಿಂದ ರೈತ ಹುಚ್ಚಪ್ಪ ಅವರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಗಾಳಿ, ಮಳೆಯಿಂದಾಗ ಈ ಭಾಗದಲ್ಲಿ ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.