ಡೈಲಿ ವಾರ್ತೆ: 22/ಏಪ್ರಿಲ್/2025

ಬಂಟ್ವಾಳದಲ್ಲಿ ಸುರಿದ ಗಾಳಿ ಮಳೆ, ವಿವಿಧೆಡೆ ಮನೆಗಳಿಗೆ ಹಾನಿ

ಬಂಟ್ವಾಳ : ಬಂಟ್ವಾಳ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ವಿವಿಧೆಡೆ ಮಳೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಪಾಣೆಮಂಗಳೂರು ಗ್ರಾಮದ ಹಾಮದ್ ಬಾವ ಮತ್ತು ಉಸ್ಮಾನ್ ಎಂಬವರ ವಾಸ್ತವ್ಯದ ಮನೆಗಳ ಹಂಚು ಛಾವಣಿಗೆ ಮಳೆ‌ಗಾಳಿಯಿಂದ ಹಾನಿಯಾಗಿರುತ್ತದೆ. ವಸಂತಿ ಕೋಂ ಮೋನಪ್ಪ ರವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಆಂಶಿಕ ಹಾನಿಯಾಗಿರುತ್ತದೆ. ಶೇಖಬ್ಬ ಎಂಬವರ ವಾಸ್ತವ್ಯದ ಮನೆಗೆ ಮಳೆ ಗಾಳಿಯಿಂದ ಆಂಶಿಕ ಹಾನಿಯಾಗಿರುತ್ತದೆ. ಗಿರಿಧರ ಕಾಮತ್ ಎಂಬವರ ರೈಸ್ ಮಿಲ್ ನ ಹಂಚು ಛಾವಣಿಗೆ ಮಳೆ‌ಗಾಳಿಯಿಂದ ಹಾನಿಯಾಗಿರುತ್ತದೆ.

ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಕುಲ್ಸುಂಬಿ ಎಂಬುವವರ ವಾಸದ ಮನೆಯ ಹಿಂಬದಿಯ ಗೋಡೆ ಮನೆಯ ಸುಮಾರು 12 ಶೀಟುಗಳು ಗಾಳಿ ಮಳೆಗೆ ಹಾನಿಯಾಗಿರುತ್ತದೆ.


ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಎಂಬಲ್ಲಿ ಪ್ರವೀಣ್ ಆಳ್ವ ಎಂಬುವವರ ತೋಟದಲ್ಲಿದ್ದ ಮರವು ಅಡಿಕೆ ಮರಗಳ ಮೇಲೆ ಬಿದ್ದು ಸುಮಾರು 35 ಅಡಿಕೆ ಮರಗಳು ಹಾನಿಯಾಗಿರುತ್ತವೆ ಎಂದು ಬಂಟ್ವಾಳ ತಾಲೂಕು ಕಛೇರಿಯ ಪ್ರಕಟಣೆ ತಿಳಿಸಿದೆ.