ಡೈಲಿ ವಾರ್ತೆ: 23/ಏಪ್ರಿಲ್/2025

ಹಿರಿಯ ರಂಗ ಕರ್ಮಿ ಕೆ ಗುರುವ ಕಾಂಚನ್ ನಿಧನ

ಕೋಟ: ಹಿರಿಯ ರಂಗಕರ್ಮಿ ಶ್ರೀ ಕೆ ಗುರುವ ಕಾಂಚನ್ ಅವರು ಮಂಗಳವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಹಲವಾರು ನಾಟಕಗಳಲ್ಲಿ ಅವರು ಪ್ರಸಾಧನ ಕಲಾವಿದರಾಗಿ ದುಡಿದಿದ್ದರು. ಹಲವು ನಾಟಕಗಳನ್ನು ನಿರ್ದೇಶಿಸಿ ತಮ್ಮದೇ ಛಾಪನ್ನು ಮೂಡಿಸಿ ಕೋಟ ಮತ್ತು ಸುತ್ತಲಿನ ಭಾಗದಲ್ಲಿ ಹೆಸರುವಾಸಿಯಾಗಿದ್ದರು.

ಶ್ರೀಯುತರು ಪುತ್ರಿ ಹಾಗೂ ಎರಡು ಪುತ್ರರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.