ಡೈಲಿ ವಾರ್ತೆ: 25/ಏಪ್ರಿಲ್/2025

ಎ. 26 ರಂದು ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ದಶಮಾನೋತ್ಸವ ಸಂಭ್ರಮ

ಕೋಟ: ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಏಪ್ರಿಲ್ 26 ರಂದು ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ ಎಂದು ಕಲಾರಂಗದ ಅಧ್ಯಕ್ಷ ಶ್ರೀ ರಾಘವೇಂದ್ರ ಕರ್ಕೇರ ಕೋಡಿ ತಿಳಿಸಿದರು ಅವರು ಸಾಲಿಗ್ರಾಮದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದಶಮಾನೋತ್ಸವದ ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದ್ದು ‘ಯಕ್ಷ ಸೌರಭ ಪ್ರಶಸ್ತಿ’ಯನ್ನು ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಾಗೂ ದಶಮಾನೋತ್ಸವ ‘ಯಕ್ಷ ಸುರಭಿ ಪ್ರಶಸ್ತಿ’ಯನ್ನು ಗೀತಾನಂದ ಫೌಂಡೇಶನ್ ಮಣೂರು ಇದರ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಅವರಿಗೆ ನೀಡಲಾಗುವುದು.

ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುವಂದನೆ ಸಲ್ಲಿಸಿಕೊಳ್ಳಲಾಗುವುದು. ಹಿರಿಯ ಹವ್ಯಾಸ ಕಲಾವಿದರಾದ ಗೋಪಾಲಕೃಷ್ಣ ಪೈ ಗಿಳಿಯಾರು, ಶಂಕರ ದೇವಾಡಿಗ ಕಾರ್ಕಡ ಇವರನ್ನು ಸನ್ಮಾನಿಸಲಾಗುವುದು.
ದಶಮ ಗೌರವ ಯಕ್ಷಸಿರಿ ಸಮ್ಮಾನಕ್ಕೆ ಸಾಲಿಗ್ರಾಮ ಮಕ್ಕಳ ಮೇಳ, ಅಜಪುರ ಕರ್ನಾಟಕ ಸಂಘ ರಿ.ಬ್ರಹ್ಮಾವರ, ಶ್ರೀ ಲಕ್ಷ್ಮಿ ಜನಾದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ, ಶ್ರೀ ಲಕ್ಷ್ಮಿ ಜನಾದನ ಕಲಾ ಸಂಘದ ಅಂಗಡಿ ಗಜಾನನ ಯಕ್ಷಗಾನ ಕಲಾಸಂಘ (ರಿ.) ದೊಂಡೆರಂಗಡಿ, ಗಜಾನನ ಯಕ್ಷಗಾನ ಕಲಾ ಸಂಘ (ರಿ.) ತೊಟ್ಟಂ, ಯಶಸ್ವಿ ಕಲಾವೃಂದ ಕೊಮೆ (ರಿ.) ತೆಕ್ಕಟ್ಟೆ, ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ.) ವಡ್ದರ್ಸೆ, ಯಕ್ಷ ನುಡಿ ಸಿರಿ ಸಿದ್ದಾಪುರ, ಶ್ರೀ ಮಹಾಗಣಪತಿ ಯಕ್ಷPಲಾ ಸಮಿತಿ ಮೊರ್ಟು, ಸುವರ್ಣ ಯಕ್ಷ ಬಳಗ ಕೋಟ, ಯಕ್ಷಕೇದಿಗೆ ಶ್ರೀ ಮಹಾಲಿಂಗೇಶ್ವರ ಕಲಾ ರಂಗ(ರಿ.) ಯಡಾಡಿ ಮತ್ಯಾಡಿ ಈ ಎಲ್ಲಾ ಸಂಘಗಳನ್ನು ಗೌರವಿಸಲಾಗುವುದು.

ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಾಡೋಜ ಜಿ. ಶಂಕರ್ ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರಾಘವೇಂದ್ರ ಕರ್ಕೇರ್ ಕೋಡಿ ವಹಿಸಲಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಯಕ್ಷ ಸೌರಭ ಪ್ರಶಸ್ತಿಯನ್ನು ಪ್ರಧಾನಿಸಲಿದ್ದಾರೆ.
ಯಕ್ಷ ಸುರಭಿ ಪ್ರಶಸ್ತಿಯನ್ನು ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಪ್ರಧಾನಿಸಲಿದ್ದಾರೆ. ಮುಖ್ಯಅಭ್ಯಾಗತರಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಕೆ. ಎಸ್. ಕಾರಂತ್, ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಅನಲಾಡಿಮಠ ಐರೋಡಿ ಇದರ ಸಂಸ್ಥಾಪಕ ಶ್ರೀ ಋಷಿಕುಮಾರ ಮಯ್ಯ, ಉದ್ಯಮಿ ಶ್ರೀ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಚಲನಚಿತ್ರ ನಿರ್ದೇಶಕ ರವಿ ಬಸ್ರೂರು, ವಿದ್ಯುತ್ ಗುತ್ತಿಗೆದಾರ ಕೆ. ಆರ್.ನಾಯಕ್, ಉದ್ಯಮಿ ಎಂ ಸಿ ಚಂದ್ರಶೇಖರ ಪೂಜಾರಿ ಸಾಸ್ತಾನ ಪಾಂಡೇಶ್ವರ, ಬ್ರಹ್ಮಾವರ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ನ್ಯಾಯವಾದಿ ಮಂಜುನಾಥ ಗಿಳಿಯಾರು, ಡಾ.ಕೃಷ್ಣ ಕಾಂಚನ್, ಶಂಭು ಪೂಜಾರಿ ಕೋಡಿ ಕನ್ಯಾನ ಭೋಜ ಪೂಜಾರಿ ಚಿತ್ರಪಾಡಿ ಭಾಗವಹಿಸಲಿದ್ದಾರೆ.
ಸಂಜೆ ಗಂಟೆ 4. ೦೦ರಿಂದ ತೆಂಕು ಬಡಗಿನ ಪ್ರಸಿದ್ದ ಕಲಾವಿದರಿಮದ ಗಾನ ಸೌರಭ, ಸಭಾ ಕಾರ್ಯಕ್ರಮದ ನಂತರ ತೆಂಕು ಬಡಗಿನ ಹವ್ಯಾಸಿ ಕಲಾವಿದರಿಂದ ದ್ರೌಪದೀ ಪ್ರತಾಪ, ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸ್ಥಾಪಕಾಧ್ಯಕ್ಷ ಹರೀರ್ಶ ಭಂಡಾರಿ ಗಿಳಿಯಾರು, ಉಪಾಧ್ಯಕ್ಷ ಕಾರ್ತಿಕ್ ಆಚಾರ್ಯ ಕೋಟ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀನಾಥ ಉರಾಳ ಚಿತ್ರಪಾಡಿ ಇದ್ದರು.