



ಡೈಲಿ ವಾರ್ತೆ: 25/ಏಪ್ರಿಲ್/2025


ಎಕ್ಸಲೆಂಟ್ ಕುಂದಾಪುರ: ಮರುಮೌಲ್ಯಮಾಪನದಿಂದ ನಿಖಿತಾ ಶೆಟ್ಟಿ(595) ತಾಲೂಕಿಗೆ ಪ್ರಥಮ

ಕುಂದಾಪುರ: 2024-25ರ ಶೈಕ್ಷಣಿಕ ವರ್ಷದ ಮರುಮೌಲ್ಯಮಾಪನದಲ್ಲಿ ಇನ್ನಷ್ಟು ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಎಕ್ಸಲೆಂಟ್‌ನ ವಿದ್ಯಾರ್ಥಿನಿಯಾದ ನಿಖಿತಾ ಶೆಟ್ಟಿ ಅವರು (595) ಅಂಕಗಳೊಂದಿಗೆ ಕುಂದಾಪುರ ತಾಲೂಕಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನಿ, ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ 5ನೇ ಸ್ಥಾನಿಯಾಗಿದ್ದಾರೆ.

ಇನ್ನಿಬ್ಬರು ವಿದ್ಯಾರ್ಥಿಯಾದ ನಮನ್ ನವೀನ್ ನಾಯಕ್ (98.4%) ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ ಹಾಗೂ ಪ್ರಸ್ತುತಿ ಶೆಟ್ಟಿ (587) ಅಂಕಗಳೊಂದಿಗೆ ರಾಜ್ಯಕ್ಕೆ 13ನೇ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಇನ್ನಷ್ಟು ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಬೋಧಕ ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.