ಡೈಲಿ ವಾರ್ತೆ: 29/ಏಪ್ರಿಲ್/2025

ಸುಜ್ಞಾನ್ ಪಿಯು ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ “ಮಂಥನ “ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ: ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಲು ದೊಡ್ಡದು – ಡಾ. ರಮೇಶ್ ಶೆಟ್ಟಿ

ಕುಂದಾಪುರ: ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ. ಯು. ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆದ ಮಂಥನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡುತ್ತಾ ” ಪ್ರತಿಯೊಂದು ಮಗುವು ಪ್ರತಿಭೆಯ ಕಣಜದಂತೆ. ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ ಆ ಪ್ರತಿಭೆ ಬೆಳಕನ್ನು ಕಂಡು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಇಂದು ಯಕ್ಷಗಾನ ಮುಂತಾದ ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುವವರು ಸಾಕಷ್ಟು ಸಾಧನೆ ಮಾಡಿ ಯಶಸ್ಸನ್ನು ಆರ್ಥಿಕ ಸದೃಢತೆಯನ್ನು ಹೊಂದುತ್ತಿದ್ದಾರೆ. ಹಾಗಾಗಿ ಕಲಾ ಪ್ರಕಾರಗಳು ಕೂಡ ಬದುಕನ್ನು ಕಟ್ಟಿಕೊಡುತ್ತವೆ ಎಂದರೆ ತಪ್ಪಾಗಲಾರದು.
ಕಲೆ ಮತ್ತು ಕಲಾವಿದರನ್ನು ಗುರುತಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಹೆಚ್ಚಾಗಿ ವಿದ್ಯಾಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಮತ್ತು ಅಭಿನಂದನೀಯ. ಇದು ಮಕ್ಕಳಿಗೆ ಹೊಸ ಪ್ರೇರಣೆಯನ್ನು ಸ್ಫೂರ್ತಿಯನ್ನು ತುಂಬಿದಂತಾಗುತ್ತದೆ. ನಾವು ನಡೆಸಿದ ಬೇಸಿಗೆ ಶಿಬಿರ ಮಂಥನದಲ್ಲಿ ಪಾಲ್ಗೊಂಡ ಮಕ್ಕಳೆಲ್ಲರೂ ಇಲ್ಲಿ ಕಲಿಸಿದ ಚಟುವಟಿಕೆಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಲಿ ಮತ್ತು ಆ ಕುರಿತು ಜ್ಞಾನ ಮತ್ತು ಆಸಕ್ತಿಯನ್ನು ಹೊಂದಲಿ” ಎಂದರು.

ಸುಜ್ಞಾನ ಎಜುಕೇಶನಲ್ ಕೃಷ್ಣ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ ” ನಮ್ಮ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಮುಂದೆ ಭಾರತದ ಉತ್ತಮ ಪ್ರಜೆಗಳಾಗಲಿ. ಇಲ್ಲಿ ಕಲಿಸಿದ ಹತ್ತು ಹಲವು ಚಟುವಟಿಕೆಗಳು ಕೌಶಲಗಳು ಅವರಿಗೆ ಸದಾ ಸ್ಪೂರ್ತಿ ತುಂಬಲಿ. ಇಲ್ಲಿ ಅವರು ಕಲಿತ ಹತ್ತಾರು ಚಟುವಟಿಕೆಗಳಲ್ಲಿ ಒಂದನ್ನಾದರೂ ಅವರು ಜೀವನದಲ್ಲಿ ಅಳವಡಿಸಿಕೊಂಡಾಗ “ಮಂಥನ” ಶಿಬಿರ ಆಯೋಜನೆಯು ಸಾರ್ಥಕ ಎಂದೆನಿಸುತ್ತದೆ ” ಎಂದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ ” ನಮ್ಮ ಬೇಸಿಗೆ ಶಿಬಿರ ಮಂಥನ ಆಯೋಜನೆಯ ಉದ್ದೇಶ ಸಮಾಜ ಸಂಪ್ರೀತಿಯೇ ಹೊರತು ಯಾವುದೇ ಸ್ವಾರ್ಥಕ್ಕಾಗಿ ಅಲ್ಲ. ಇಂದಿನ ಮಕ್ಕಳು ಮುಂದೆ ದೇಶದ ಆಸ್ತಿ ಸಂಪನ್ಮೂಲ ಆಗಿರುವುದರಿಂದ ಅವರನ್ನು ಮಾನಸಿಕ ಸದೃಢರನ್ನಾಗಿ ಮಾಡುವುದು ಬಹಳ ಮುಖ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅವರಿಗೆ ಬೇಸಿಗೆ ಶಿಬಿರದಲ್ಲಿ ನೀಡುವ ಕೌಶಲಗಳು,ತರಬೇತಿಗಳು ಉಪಯೋಗಕ್ಕೆ ಬರುತ್ತವೆ. ಹಾಗಾಗಿ ಸದೃಢ ಭಾರತವನ್ನು ನಿರ್ಮಿಸುವಲ್ಲಿ ಪಠ್ಯೇತರ ಚಟುವಟಿಕೆಗಳ ಪಾತ್ರವು ಮುಖ್ಯವಾಗುತ್ತದೆ ” ಎಂದರು.

ವೇದಿಕೆಯಲ್ಲಿ ಕೋಳಗಿ ಕೊಟ್ರೇಶ್ ಕೂಡ್ಲಿಗಿ, ಸುಜ್ಞಾನ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಯೋಗಾಸನ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸೃಷ್ಟಿ ಕೆ ವೈ. ಯನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಕಣ್ತುಂಬಿಸಿಕೊಂಡರು. ಕೊಟ್ರೇಶಿ ಕೂಡ್ಲಗಿ ಅವರ ಹಾಸ್ಯ ಕಾರ್ಯಕ್ರಮ ಹೊಸ ಲೋಕವನ್ನೇ ಸೃಷ್ಟಿಸಿದಂತಾಗಿ ಮಕ್ಕಳು ಮತ್ತು ಪೋಷಕರು ನಗುವಿನ ಅಲೆಯಲ್ಲಿ ತೇಲಾಡಿದರು ಮತ್ತು ಸಂಸ್ಥೆಯ ಮತ್ತು ಬೇಸಿಗೆ ಶಿಬಿರದ ಕುರಿತು ಪ್ರಶಂಸೆಯ ನುಡಿಗಳನ್ನಾಡಿದರು.

ಗಮನ ಸೆಳೆದ ಯೋಗ ಪ್ರದರ್ಶನ
ಸಂಗೀತ, ನೃತ್ಯ, ಕ್ರೀಡೆ, ಯೋಗ ಮುಂತಾದ ಹಲವು ವಿಭಾಗಗಳಲ್ಲಿ ಸಾದ್ಜನೆಗೈದಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ,ಯೋಗಾಸನ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಹುಮಾನ, ಪ್ರಶಸ್ತಿ ಪಡೆದಿರುವ ದಾವಣಗೆರೆಯ ಸೃಷ್ಟಿ ಕೆ.ವೈ.ಅವರಿಂದ ಯೋಗಾಸನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಶಿಕ್ಷಕಿ ಪ್ರೇಮ ಸ್ವಾಗತಿಸಿ, ಸಂಸ್ಕೃತ ಶಿಕ್ಷಕ ರಜತ್ ಭಟ್ ಕಾರ್ಯಕ್ರಮ ನಿರೂಪಿಸಿದರು.