ಡೈಲಿ ವಾರ್ತೆ: 05/MAY/2025

ಬೆಳ್ತಂಗಡಿ| ಆಟವಾಡುತ್ತಿದ್ದ ವೇಳೆ 16 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು!

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿವಾಸಿ ಒಂಭತ್ತನೇ ತರಗತಿ ಮುಗಿಸಿ ಹತ್ತನೇ ತರಗತಿ ಹೋಗಬೇಕಾದ ವಿಧ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮೇ 4ರಂದು ಸಂಭವಿಸಿದೆ.

ಧರ್ಮಸ್ಥಳದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗೋವಿಂದ ಗೌಡರ ಪುತ್ರ ಪ್ರಥಮ್ (16) ಮೃತ ಬಾಲಕ.

ಮೇ 4ರಂದು ಮಧ್ಯಾಹ್ನ ಮನೆಯ ಸಮೀಪ ಆಟವಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಬಾಲಕನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಫಲಕಾರಿಯಾಗಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.