ಡೈಲಿ ವಾರ್ತೆ: 09/MAY/2025

ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ

ಕರಾಚಿ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿದ್ದು, ಭಾರತ ವಾಯು ಸೇನಾಪಡೆ ಪಾಕಿಸ್ತಾನ ಹಲವು ನಗರಗಳಿಗೆ ನುಗ್ಗಿ ಹೊಡೆಯುತ್ತಿದೆ. ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕ್​ ನಗರಗಳ ಮೇಲೆ ದಾಳಿ ನಡೆಸಿದೆ. ಇತ್ತ ಭಾರತೀಯ ನೌಕಾಪಡೆಯೂ ಸಹ ಐಎನ್‌ಎಸ್‌ ವಿಕ್ರಾಂತ್ ಮೂಲಕ ತನ್ನ ಆರ್ಭಟ ಶುರು ಮಾಡಿಕೊಂಡಿದೆ.

ಪಾಕಿಸ್ತಾನದ ಕರಾಚಿ ಬಂದರನ್ನು ಭಾರತ ಸರ್ವನಾಶ ಮಾಡಿದೆ. 1971ರ ನಂತರ ಕರಾಚಿ ಮೇಲೆ ಭಾರತ ದಾಳಿ ಮಾಡಿದ್ದು, ಐಎನ್‌ಎಸ್‌ ವಿಕ್ರಾಂತ್ 10ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಕರಾಚಿ ಬಂದರನ್ನು ಧ್ವಂಸಗೊಳಿಸಿದೆ.
1 ಏರ್‌ ಕ್ರಾಫ್ಟ್‌ಗಳ ಮೂಲಕ ಭಾರತೀಯ ನೌಕಾಪಡೆ ದಾಳಿ ನಡೆಸಿದ್ದು, ಕರಾಚಿ ಬಂದರ ನಾಶವಾಗಿದೆ. ಮೂಲಕ ಭಾರತ, ಪಾಕಿಸ್ತಾನದ ಮೇಲೆ ಬೃಹತ್ ದಾಳಿ ನಡೆಸಿದೆ. 10 ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಕರಾಚಿ ಬಂದರನ್ನು ನಾಶಗೊಳಿಸಿದೆ ಎನ್ನಲಾಗಿದೆ.