



ಡೈಲಿ ವಾರ್ತೆ: 12/MAY/2025


ನಂದಿಕೂರು ದೇವಸ್ಥಾನದ ಕೆರೆಗೆ ಬಿದ್ದು 4 ವರ್ಷದ ಮಗು ಮೃತ್ಯು

ಪಡುಬಿದ್ರಿ: ಸಂಬಂಧಿಕರ ಮದುವೆಗೆ ನಂದಿಕೂರು ದೇವಸ್ಥಾನದ ಸಭಾಭವನಕ್ಕೆ ಬಂದಿದ್ದ ಮಗುವೊಂದು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಕುರ್ಕಾಲು ಗ್ರಾಮದ ಸತ್ಯನಾರಾಯಣ ಹೆಬ್ಬಾರ್ ಅವರ ಮಗು ವಾಸುದೇವ ಹೆಬ್ಬಾರ್ (4) ಮೃತ ಮಗು. ಭಾನುವಾರ ಮಧ್ಯಾಹ್ನದ ಸಮಯ ಮದುವೆ ಹಾಲ್ ನಲ್ಲಿ ಮಗು ಕಾಣದಿದ್ದಾಗ ಹುಡುಕಾಡುವಾಗ ಕೆರೆಯ ನೀರಲ್ಲಿ ಮಗು ತೇಲುತ್ತಿರುವುದು ಕಂಡುಬಂದಿದೆ. ತತ್‌ಕ್ಷಣವೇ ಉಡುಪಿ ಹಾಗೂ ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.